ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಿ : ಸಿಇಓ


ಸಂಜೆವಾಣಿ ವಾರ್ತೆ
ಗಂಗಾವತಿ, ಮಾ.07: ತಾಲೂಕಿನ ಬಸಾಪಟ್ಟಣ ಹಾಗೂ ಶ್ರೀರಾಮನಗರ ಗ್ರಾಮಗಳ ರಾಜೀವ್ ಗಾಂಧಿ ಬಹುಗ್ರಾಮ ಕುಡಿವ ನೀರಿನ ಯೋಜನೆ ವ್ಯಾಪ್ತಿಯ ಕೆರೆ ಹಾಗೂ ನೀರು ಶುದ್ಧೀಕರಣ ಘಟಕಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ಅವರು ಭೇಟಿ ನೀಡಿ ಪುನಶ್ಚೇತನ ಕಾಮಗಾರಿಗಳ ಪರಿಶೀಲನೆ ಮಾಡಿದರು.
ಜಿಪಂ ಸಿಇಓ ರಾಹುಲ್ ರತ್ನಂ ಪಾಂಡೆ ಅವರು ಮಾತನಾಡಿ, ಬಸಾಪಟ್ಟಣ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ 10 ಗ್ರಾಮಗಳು ಬರುತ್ತವೆ. ಶ್ರೀರಾಮನಗರ ಬಹುಗ್ರಾಮ ಕುಡಿವ ನೀರಿನ ಯೋಜನೆ ವ್ಯಾಪ್ತಿಗೆ 13 ಗ್ರಾಮಗಳು ಬರುತ್ತವೆ. ನಿಗದಿತ ಸಮಯದಲ್ಲಿ ಪ್ರಗತಿ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಾಲ ಕಾಲಕ್ಕೆ ಕೆರೆ ನೀರಿನ ಪರೀಕ್ಷೆ ನಡೆಸಬೇಕು. ಕೆರೆ ಒಡ್ಡಿನಿಂದ ನೀರು ಸೋರಿಕೆ ಆಗದಂತೆ ಕ್ರಮವಹಿಸಬೇಕು ಎಂದು ಆರ್ ಡಬ್ಲ್ಯುಎಸ್ ಇಂಜಿನಿಯರ್ ಗಳಿಗೆ ಜಿಪಂ ಸಿಇಓ ಅವರು ಸೂಚಿಸಿದರು. ಗ್ರಾಮೀಣ ಭಾಗದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಬೇಕು. ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಸಮರ್ಪಕವಾಗಿ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದರು.
ಈ ವೇಳೆ ಜಿ.ಪಂ. ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹಾಂತಗೌಡ ಪಾಟೀಲ್, ಆರ್ ಡಬ್ಲ್ಯುಎಸ್ ಎಇಇ ಸತೀಶ, ಕಿರಿಯ ಅಭಿಯಂತರರಾದ ಸಿದ್ದಪ್ಪ, ಇಂಜಿನಿಯರ್ ಸುರೇಶ, ರಾಜಕಿಶೋರ್, ವೆಂಕಟಗಿರಿ ಗ್ರಾಪಂ ಪಿಡಿಒ ವಿದ್ಯಾವತಿ, ಶ್ರೀರಾಮನಗರ ಗ್ರಾಪಂ ಪಿಡಿಓ ವತ್ಸಲಾ, ನರೇಗಾ ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ತಾಪಂ ಸಿಬ್ಬಂದಿ ಭೀಮಣ್ಣ, ಶ್ರೀರಾಮನಗರ ಗ್ರಾಪಂ ಅಧ್ಯಕ್ಷೆ ಕೆ.ಶ್ರೀಲಕ್ಷ್ಮೀ, ಉಪಾಧ್ಯಕ್ಷರಾದ ರೆಡ್ಡಿ ವೀರರಾಜು ಇದ್ದರು.

One attachment • Scanned by Gmail