
ಚಿತ್ರದುರ್ಗ.ಏ.೧೮; ಬೇಸಿಗೆ ಕಾಲದಲ್ಲಿ ಬದುಕು ಬಸವಳಿಯದಿರಲು ಹೆಚ್ಚು ಹೆಚ್ಚು ನೀರು, ಮಜ್ಜಿಗೆ ಕುಡಿಯಿರಿ ಎಂದು ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.ಚಿತ್ರದುರ್ಗ ತಾಲ್ಲೂಕಿನ ಯಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಬೇಸಿಗೆ ಕಾಲದಲ್ಲಿ ಬದುಕು ಬಸವಳಿಯದಿರಲು ಹೇಗೆ ನಿರ್ವಹಣೆ ಮಾಡಬೇಕು ಎಂಬುವುದರ ಕುರಿತು ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ ಈ ಪ್ರಖರತೆ ಜೂನ್ ಎರಡನೇ ವಾರದವರೆಗೂ ಮುಂದುವರೆಯುವುದರಿಂದ ಖಂಡಿತವಾಗಿ ನಾವು ಕೆಲವೊಂದು ವ್ಯವಸ್ಥೆ ಮಾಡಿಕೊಳ್ಳಲೇಬೇಕಿದೆ. ಇಲ್ಲವಾದರೆ ವಯಸ್ಕರು ಮಕ್ಕಳು ವಯೋವೃದ್ಧರು ಎಲ್ಲರೂ ಜೀವಕ್ಕೆ ಅಪಾಯ ತಂದುಕೊಳ್ಳಬೇಕಾದೀತು. ಮಕ್ಕಳಲ್ಲಿ ಆehಥಿಜಡಿಚಿಣioಟಿ ವೃದ್ಧರಲ್ಲಿ Suಟಿ sಣಡಿoಞe ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುತ್ತದೆ. ಆದ್ದರಿಂದ ಈ ಬೇಸಿಗೆಯಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳುವುದರ ಮೂಲಕ ಹೆಚ್ಚು ಹೆಚ್ಚು ನೀರು, ಮಜ್ಜಿಗೆ, ಗಂಜಿ ಸೇವನೆ ಮಾಡಿ ಎಂದರು.