ಬೇಸನ್‌ ಬರ್ಫಿ

ಬೇಕಾಗುವ ಸಾಮಗ್ರಿ:

ಸಾಮಗ್ರಿ: ಕಡ್ಲೆ ಹಿಟ್ಟು-1 ಕಪ್‌, ತುಪ್ಪ-ಮುಕ್ಕಾಲು ಕಪ್‌, ಚಿರೋಟಿ ರವೆ-4 ಟೇಬಲ್‌ ಸ್ಪೂನ್‌, ಸಕ್ಕರೆ ಪುಡಿ-ಮುಕ್ಕಾಲು ಕಪ್‌, ಏಲಕ್ಕಿ ಪುಡಿ-ಅರ್ಧ ಟೀ ಸ್ಪೂನ್‌, ಬಾದಾಮಿ ತುಂಡು-2 ಟೇಬಲ್‌ ಸ್ಪೂನ್‌.

ಮಾಡುವ ವಿಧಾನ: ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಕಡ್ಲೆ ಹಿಟ್ಟು ಮತ್ತು ರವೆ ಹಾಕಿ ಎರಡು ನಿಮಿಷ ಹುರಿಯಿರಿ. ನಂತರ ಉರಿ ಕಡಿಮೆ ಮಾಡಿ ಸಕ್ಕರೆ ಪುಡಿ ಮತ್ತು ಏಲಕ್ಕಿ ಪುಡಿ ಹಾಕಿ ಐದು ನಿಮಿಷ ತಿರುವುತ್ತಿರಿ. ಕಡ್ಲೆ ಹಿಟ್ಟಿನ ಬಣ್ಣ ಬದಲಾಗಿ ಹಸಿ ವಾಸನೆ ಹೋಗುವವರೆಗೆ ಹುರಿಯಿರಿ. ಬಳಿಕ ಈ ಮಿಶ್ರಣವನ್ನು ಜಿಡ್ಡು ಸವರಿದ ತಟ್ಟೆಗೆ ಹಾಕಿ ಸಮತಟ್ಟಾಗಿ ಹರಡಿ. ಮೇಲೆ ತೆಳ್ಳಗೆ ಹೆಚ್ಚಿದ ಬಾದಾಮಿ ಚೂರುಗಳನ್ನು ಉದುರಿಸಿ. ನಂತರ ಇದನ್ನು ಚೌಕಾಕಾರದ ಬಿಲ್ಲೆಗಳಾಗಿ ಕತ್ತರಿಸಿ.