ಬೇವೂರು ವಿ.ಎಸ್.ಎಸ್.ಎನ್. ಅಧ್ಯಕ್ಷರಾಗಿ ಹಳ್ಳಿ ಉಪಾಧ್ಯಕ್ಷರಾಗಿ ಮಂಜುಳಾ 


ಸಂಜೆವಾಣಿ ವಾರ್ತೆ
ಕುಕನೂರು, ಮಾ.14: ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ನಾಗರಾಜ ಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ಮಂಜುಳಾ ಬಳಿಗಾರ್ ಗೆಲುವು ಸಾಧಿಸಿದ್ದಾರೆ. ಸಚಿವ ಹಾಲಪ್ಪ ಆಚಾರ ಬಣ  ಮಂಗಳವಾರ ನಡೆದ ಚುನಾವಣೆಯಲ್ಲಿ ವಿಜಯದ ಮಾಲೆ ಹಾಕಿಕೊಂಡಿದೆ ನಂತರ ವಿಜಯೋತ್ಸವ ದಲ್ಲಿ ಮುಖಂಡರಾದ ಶಂಕರಗೌಡ  ಟನಕನಕಲ್,ಶರಣಪ್ಪ ಮದ್ಲುರು,ವೆಂಕಟೇಶ್ ಗಾದಿ, ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಲಿಂಗಪ್ಪ ಕೊಳಜಿ,ಉಪಾಧ್ಯಕ್ಷೆ ಅನ್ನ ಪುಣ೯ ಗಡ್ಡದ,ದೇವೇಂದ್ರಪ್ಪ ತಳವಾರ್, ನಿಂಗಪ್ಪ ಕೊಲಾಜಿ, ಸಿದ್ದು ಮನ್ನಿನವರ್, ಶಿವಾನಂದ ಹಿರೇಮನಿ , ಮತು೯ಜಾ ಸಾಬ್ ನವಲಿ,              ಶೇಖರಪ್ಪ ಲಗಳೂರು, ತೋಟಪ್ಪ ಅಂಗಡಿ ,ದುರಗಪ್ಪ ಅಮಲ್ಚಿತ್ತಿ, ದುರಗಪ್ಪ ನೂತಾಲ ದಿನ್ನಿ ಮೊದಲಾದವರು ಹಾಜರಿದ್ದು ಶುಭ ಹಾರೈಸಿದರು.