ಬೇವಿನ ಎಲೆಗಳ ಉಪಯೋಗ


ಬೇವಿನ ಎಲೆಗಳಲ್ಲಿ ಆಯಂಟಿಬ್ಯಾಕ್ಟೀರಿಯಲ್‌, ಆಯಂಟಿ ಫಂಗಲ್‌ ಮತ್ತು ಆಯಂಟಿಮೈಕ್ರೋಬಿಯಲ್‌ ಪ್ರಾಪರ್ಟಿ ಹೆಚ್ಚಾಗಿರುತ್ತವೆ. ನೀವು ವಾರದಲ್ಲಿ ಎರಡು ಬಾರಿ ಈ ನೀರಿನಿಂದ ಸ್ನಾನ ಮಾಡಿದರೆ ಹಲವಾರು ಚರ್ಮ ಸಮಸ್ಯೆಗಳು ಕಂಟ್ರೋಲ್‌ ಆಗುತ್ತವೆ. ಇದರಿಂದ ಉಂಟಾಗುವ ಲಾಭಗಳು ಏನು, ಯಾವ ರೀತಿ ನೀರಿಗೆ ಬೆರೆಸಬೇಕು ತಿಳಿಯಿರಿ…

ಬೇವಿನ ನೀರು ತಯಾರಿಸೋದು ಹೀಗೆ…
8 ರಿಂದ 10 ಗ್ಲಾಸ್‌ ನೀರಿಗೆ ಬೇವಿನ ಎಲೆಗಳನ್ನು ಹಾಕಿ ಕುದಿಸಿ. ತಂಪಾದ ನಂತರ ಆ ನೀರನ್ನು ಒಂದು ಬಕೆಟ್‌ ನೀರಿಗೆ ಮಿಕ್ಸ್‌ ಮಾಡಿ ಸ್ನಾನ ಮಾಡಿ. ಇದನ್ನು ವಾರದಲ್ಲಿ ಎರಡು ಬಾರಿ ಮಾಡಬೇಕು.

ಲಾಭಗಳು ಏನು?

ಬೇವಿನ ನೀರಿನಿಂದ ಸ್ನಾನ ಮಾಡಿದರೆ ಅದರಲ್ಲಿರುವ ಆಯಂಟಿಬ್ಯಾಕ್ಟೀರಿಯಲ್‌ ಪ್ರಾಪರ್ಟಿಯಿಂದಾಗಿ ಪಿಂಪಲ್‌ ಸಮಸ್ಯೆ ನಿವಾರಣೆಯಾಗುತ್ತದೆ.
ಬ್ಲ್ಯಾಕ್‌ಹೆಡ್ಸ್‌ ದೂರವಾಗುತ್ತದೆ : ಬೇವಿನಲ್ಲಿರುವ ಆಯಂಟಿಸೆಪ್ಟಿಕ್‌ ಗುಣದಿಂದಾಗಿ ಬ್ಲ್ಯಾಕ್‌ಹೆಡ್ಸ್‌ ಸಮಸ್ಯೆ ದೂರವಾಗುತ್ತದೆ.

ಬೇವಿನ ನೀರಿನಲ್ಲಿರುವ ವಿಶೇಷ ಗುಣದಿಂದಾಗಿ ದೇಹದಲ್ಲಿರುವ ಬ್ಯಾಕ್ಟೀರಿಯಾ ನಿವಾರಣೆಯಾಗುತ್ತದೆ. ಇದರಿಂದ ಬೆವರಿನ ವಾಸನೆ ಕೂಡ ದೂರವಾಗುತ್ತದೆ.

ಬೇವಿನ ನೀರಿನಲ್ಲಿರುವ ತತ್ವದಿಂದ ಇದನ್ನು ತಲೆಗೆ ಹಾಕಿದರೆ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದಾಗಿ ಕೂದಲು ಉದುರುವುದು ಸಹ ಕಡಿಮೆಯಾಗುತ್ತದೆ.

ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಬೇವಿನ ನೀರು ಹಾಕಿ ಸ್ನಾನ ಮಾಡುವುದು ಉತ್ತಮ. ಯಾಕೆಂದರೆ ಇದರಲ್ಲಿರುವ ಆಯಂಟಿಬ್ಯಾಕ್ಟೀರಿಯಲ್‌ ಪ್ರಾಪರ್ಟಿಯಿಂದಾಗಿ ತಲೆಯಲ್ಲಿರುವ ಹೇನು ನಿವಾರಣೆಯಾಗುತ್ತದೆ. ಅಲ್ಲದೆ ಕಜ್ಜಿ, ತುರಿಕೆ ಮೊದಲಾದ ಸಮಸ್ಯೆಗಳು ಉಂಟಾಗುವುದಿಲ್ಲ.

ತಲೆಗೂ ಇದನ್ನು ಹಾಕಿ ಸ್ನಾನ ಮಾಡುವುದರಿಂದ ನಿಮ್ಮ ಕೂದಲ ಹೊಳಪು ಹೆಚ್ಚುತ್ತದೆ ಅಲ್ಲ, ಸ್ಮೂತ್‌ ಕೂಡ ಆಗುತ್ತದೆ.

ಬೇವಿನ ನೀರಿನಿಂದ ಸ್ನಾನ ಮಾಡುವುದರಿಂದ ಕಣ್ಣಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಣೆಯಾಗುತ್ತದೆ. ಇದರಿಂದಾಗಿ ಇನ್‌ಫೆಕ್ಷನ್‌ ಸಂಭವಿಸುವ ಚಾನ್ಸಸ್‌ ಕಡಿಮೆಯಾಗುತ್ತದೆ.

ಬೇವಿನ ನೀರಿನಲ್ಲಿ ಇರುವಂತಹ ಆಯಂಟಿಬ್ಯಾಕ್ಟೀರಿಯಲ್‌ ಮತ್ತು ಆಯಂಟಿಫಂಗಲ್‌ ಅಂಶದಿಂದಾಗಿ ಸ್ಕಿನ್‌ ಇನ್‌ಫೆಕ್ಷನ್‌ ನಿವಾರಣೆಯಾಗುತ್ತದೆ.