ಬೇವಿನಾಳ ಗ್ರಾಮದೇವತೆ ಉಡಿ ತುಂಬುವ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ಕಾರಟಗಿ ಸೆ 02 : ಸಮೀಪದ ಬೇವಿನಾಳ  ಗ್ರಾಮದ ಏಳು ಊರಿನ ಗ್ರಾಮದೇವತೆ ದ್ಯಾವಮ್ಮ ದೇವಿಗೆ ಬೇವಿನಾಳ ಗ್ರಾಮದ ಗುರುಹಿರಿಯರು ಭಕ್ತಾದಿಗಳು ಮತ್ತು ಸುಮಂಗಲಿಯರು ಮಡಿಯಿಂದ ಹೊಸ ಹುಡುಗಿಯ ಕೊಡುಗೆಗಳನ್ನು ಬಾಜಾಭಜಂತ್ರಿ ಹಾಗೂ ಡೊಳ್ಳು ಕುಣಿತ ಹಾಗೂ ಕಳಶದೊಂದಿಗೆ ಮೂಲಕ ತೆರಳಿ ಗ್ರಾಮದೇವತೆಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು. ಊರಿನ ಮುಖಂಡರು ಮಾತನಾಡಿದರು. ಬೇವಿನಾಳ ಗ್ರಾಮ ಸೇರಿದಂತೆ ಊರಿನ ಗ್ರಾಮದೇವತೆಯಾದ ದ್ಯಾವಮ್ಮ ದೇವಿಗೆ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಕಾರ್ಯಕ್ರಮ ಪದ್ಧತಿಯನ್ನು ಪ್ರತಿವರ್ಷದಂತೆ ಈ ವರ್ಷವೂ ಸಹಿತ ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಮಹಿಳೆಯರು ಗ್ರಾಮದೇವತೆಗೆ ಜೋಗಮ್ಮನವರೊಂದಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿಸಿದರು.
ಮತ್ತು 2 ಮರಿ ಕೋಣಗಳನ್ನು ಗ್ರಾಮದೇವತೆಗೆ ಬಿಡುತ್ತಾರೆ. ಸಕಾಲಕ್ಕೆ ಸರಿಯಾಗಿ  ನಮ್ಮ ರೈತರಿಗೆ ಮಳೆ ಬೆಳೆ ಆಗುವಂತೆ ಗ್ರಾಮಕ್ಕೆ ಯಾವುದೇ ತರಹದ ಕೋರೊನ ಸೇರಿದಂತೆ ಇನ್ನಿತರ ಮಾರಣಾಂತಿಕ ಕಾಯಿಲೆ ಗಳಿಂದ ಕಾಪಾಡುವಂತೆ ಗ್ರಾಮದೇವತೆಯನ್ನು ಸ್ಮರಿಸುತ್ತಾ ಶನಿವಾರದಂದು ಆಂಜನೇಯ ಸ್ವಾಮಿ ಹಾಗೂ ಬಸವಣ್ಣ ಕರೆತರಲಾಯಿತು.
 ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ದಾನನ ಗೌಡ, ಬೇವಿನಳ ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಯ್ಯ ಮಡೆರ್, ಹೂವಪ್ಪ ಗ್ರಾಮ ಪಂಚಾಯಿತಿ ಸದಸ್ಯ, ಪ್ರಕಾಶ್ ಹೂಗಾರ್, ಆಂಜನೇಯ ಭೂಮಿ, ಶಿವು ಬೇವಿನಾಳ ,ಸಿದ್ದು ಗಂಗಾವತಿ, ಬೀರಪ್ಪ ಚಳ್ಳೂರು ರವಿ ಸ್ವಾಮಿ ಹಿರೇಮಠ ಯುವಕರು ಪಾಲ್ಗೊಂಡಿದ್ದರು.