ಬೇಳೆ ಖಾರದ ಹೋಳಿಗೆ

ಸಾಮಾನ್ಯವಾಗಿ ಬೇಳೆ ಹೋಳಿಗೆ ಸಿಹಿ ಮಾಡುತ್ತಾರೆ! ಬೆಂದ ಬೇಳೆಗೆ ಖಾರಾ ಹಾಕಿ ರುಬ್ಬಿ ಮಾಡುವುದೇ ಈ ರೆಸಿಪಿ ವಿಶೇಷ!
ಮಾಡುವ ವಿಧಾನ:
ಮೈದಾ, ಉಪ್ಪು, ಚಿಟಿಕೆ ಅರಿಷಿಣ, ಎಣ್ಣೆ ಹಾಕಿ, ಕಲೆಸಿ, ನೀರು ಸೇರಿಸಿ ಮೆತ್ತಗೆ ಕಣಕವನ್ನು ಕಲೆಸಿ ಮೇಲೆ ಸ್ವಲ್ಪ ಎಣ್ಣೆ ಹಾಕಿ ನೆನೆಯಲು ಇಡಿ.
ಕಾಯಿ ತುರಿ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಹಿಂಗು ಸೇರಿಸಿ ತರಿ ತರಿಯಾಗಿ ರುಬ್ಬಿ, ಬೇಯಿಸಿದ 1 ಲೋಟ ತೊಗರಿ ಬೇಳೆ, ಉಪ್ಪು ಸೇರಿಸಿ, ರುಬ್ಬಿ ಹೂರಣ ತಯಾರಿಸಿ, ಉಂಡೆ ಮಾಡಿಕೊಳ್ಳಿ‌.
ಬಾಳೆ ಎಲೆಗೆ ಎಣ್ಣೆ ಸವರಿ, ಕಣಕವನ್ನು ತಟ್ಟಿ ಹೂರಣವನ್ನು ತುಂಬಿ, ಮಡಚಿ ಹೋಳಿಗೆ ಮಾಡಿ ಕಾದ ತವಾ ಮೇಲೆ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ, ತುಪ್ಪದೊಂದಿಗೆ ಬಿಸಿಯಾಗಿ ಬಡಿಸಿ.