ಬೇಲ್ ಪುರಿ

ಬೇಕಾಗುವ ಸಾಮಗ್ರಿಗಳು

 • ಮಂಡಕ್ಕಿ – ೧/೨ ಕೆ.ಜಿ
  *ಬ್ಯಾಡಗಿ ಮೆಣಸಿನಕಾಯಿ – ೧೦೦ ಗ್ರಾಂ
  *ಶುಂಠಿ –
  *ಈರುಳ್ಳಿ – ೧
  *ಅರಿಶಿಣ – ೧/೨ ಚಮಚ
  *ಬೆಳ್ಳುಳ್ಳಿ – ೧
  *ಕೊತ್ತಂಬರಿ ಸೊಪ್ಪು –
  *ಕ್ಯಾರೆಟ್ ತುರಿ – ೨ ಚಮಚ
  *ಖಾರದ ಕಡ್ಲೆಕಾಯಿ ಬೀಜ – ೧೦೦ಗ್ರಾಂ
  *ಖಾರ ಬೂಂದಿ – ೧೦೦ ಗ್ರಾಂ
  *ಆಲೂಗಡ್ಡೆ – ೧
  *ಅಚ್ಚಖಾರದ ಪುಡಿ – ೧ ಚಮಚ
  *ಸೇವ್ – ೧೦೦ ಗ್ರಾಂ
  *ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಬ್ಯಾಡಗಿ ಮೆಣಸಿನಕಾಯಿ, ಬೆಳ್ಳುಳ್ಳಿಯೊಂದಿಗೆ, ಸ್ವಲ್ಪ ನೀರು ಹಾಕಿ ರುಬ್ಬಿ, ಮೆಣಸಿನಕಾಯಿ ಚಟ್ನಿ ರೆಡಿ ಮಾಡಿಕೊಳ್ಳಿ. ಬೌಲಿಗೆ ಮಂಡಕ್ಕಿ ಹಾಕಿ. ಇದಕ್ಕೆ ಚಿಕ್ಕದಾಗಿ ಹೆಚಿರುವ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು , ಕ್ಯಾರೆಟ್ ತುರಿ, ಖಾರದ ಕಡ್ಲೆ ಬೀಜ, ಖಾರ ಬೂಂದಿ, ಬೇಯಿಸಿ ಕಟ್ ಮಾಡಿದ ಆಲೂಗಡ್ಡೆ, ಸೇವ್, ಅಚ್ಚಖಾರದ ಪುಡಿ, ಮೆಣಸಿನಕಾಯಿ ಚಟ್ನಿ, ಬೆಲ್ಲದ ಪಾಕ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿದರೆ ಬೇಲ್ ಪುರಿ ರೆಡಿ.