ಬೇಲಿಗೆ ಸಿಲುಕಿದ್ದ ಚಿರತೆ ರಕ್ಷಣೆ


ಶಿರ್ವ, ನ.೧೭- ಶಿರ್ವ ಗ್ರಾಪಂ ವ್ಯಾಪ್ತಿಯ ಅಡಪಾಡಿ ಪದವು ಬಳಿಯ ಅಶ್ವತ್ಥಕಟ್ಟೆ ಸಮೀಪ ಶಿರ್ವ-ಪಳ್ಳಿ ಮುಖ್ಯರಸ್ತೆಯ ಕಾಡಿನಲ್ಲಿ ತಂತಿ ಬೇಲಿಗೆ ಸಿಲುಕಿ ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ತಂಡ ಬುಧವಾರ ರಕ್ಷಿಸಿದೆ.
ಮಾಹಿತಿ ತಿಳಿದು ಪಡುಬಿದ್ರೆ ಉಪ ವಲಯಾರಣ್ಯಾಧಿಕಾರಿ ಗುರುರಾಜ್ ಕೆ., ಅರಣ್ಯ ರಕ್ಷಕ ರಾದ  ಚರಣ್‌ರಾಜ್ ಜೋಗಿ, ಮಂಜುನಾಥ್ ನಾಯಕ್, ಕೇಶವ ಪೂಜಾರಿ, ವಾಹನ ಚಾಲಕ ಜೋಯ್ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಅರವಳಿಕೆ ತಜ್ಞ ವೈದ್ಯರು ಆಗಮಿಸಿ, ಅರವಳಿಕೆ ಮದ್ದು ನೀಡಿ, ಚಿರತೆಯನ್ನು ಸರಕ್ಷಿತವಾಗಿ ಸೆರೆ ಹಿಡಿಯಲಾಯಿತು.