ಬೇರೆ ಜನಾಂಗಕ್ಕೂ ನಿಗಮ ಸ್ಥಾಪಿಸಲಿ

ಬೆಂಗಳೂರು,ನ.೧೭- ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ.ಆದರೆ ಇದು ಓಲೈಕೆ ರಾಜಕಾರಣ ಎಂದಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಬೇರೆ ಜನಾಂಗಕ್ಕೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದ ಹಲವು ಜನಾಂಗಗಳಿವೆ. ಇವುಗಳಿಗೂ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಆಗ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ ಎಂದು ಅವರು ಹೇಳಿದರು.
ಬಸವ ಕಲ್ಯಾಣ ಕ್ಷೇತ್ರದ ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮರಾಠ ಸಮುದಾಯವನ್ನು ಓಲೈಸಲು ನಿಗಮ ಸ್ಥಾಪಿಸಿದ್ದಾರೆ.ಇದಕ್ಕೆ ನನ್ನ ವಿರೋಧವಿಲ್ಲ. ಆದರೆ, ಎಲ್ಲ ಜನಾಂಗದವರಿಗೂ ನಿಗಮ ಸ್ಥಾಪಿಸುವುದು ಒಳಿತು ಎಂದರು.
ಕೋವಿಡ್‌ನ ಈ ಸಂದರ್ಭದಲ್ಲಿ ಕಾಲೇಜುಗಳನ್ನು ತೆರೆಯುವುದು ಬೇಡ ಎಂದು ಸರ್ಕಾರಕ್ಕೆ ಎರಡು ಪತ್ರ ಬರೆದಿದ್ದೆ. ಆದರೂ ಸರ್ಕಾರ ಕಾಲೇಜು ಆರಂಭಿಸಿದೆ. ವಿದ್ಯಾರ್ಥಿಗಳು ಹೆಚ್ಚಿನ ಜಾಗೃತಿ ವಹಿಸಬೇಕು. ಮೇಲಿಂದ ಮೇಲೆ ಕೋವಿಡ್ ಟೆಸ್ಟ್ ಆಗಬೇಕು ಎಂದರು.
ಖಾಸಗಿ ಕಾಲೇಜುಗಳು ತಮ್ಮ ಬೋಧಕ ಸಿಬ್ಬಂದಿಗೆ ಸಂಬಳ ನೀಡಬೇಕು. ಹಾಗಾಗಿ ಸರ್ಕಾರ ಇವರ ಒತ್ತಾಯಕ್ಕೆ ಮಣಿದು ಕಾಲೇಜು ಆರಂಭಿಸಲು ಅನುಮತಿ ನೀಡಿದೆ ಎಂದು ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ರಾಜ್ಯದಲ್ಲಿ ಕೋವಿಡ್ ಟೆಸ್ಟ್ ಕಡಿಮೆ ಮಾಡಿದ್ದಾರೆ.ಹಾಗಾಗಿ ಸೋಂಕು ಪ್ರಕರಣಳು ಇಳಿಮುಖವಾಗಿದೆ. ಯಾವುದೇ ಕಾರಣಕ್ಕೂ ಸೋಂಕು ಪರಕ್ಷೆಗಳು ಕಡಿಮೆ ಮಾಡಬಾರದು ಎಂದು ಅವರು ಹೇಳಿದರು.