ಬೇರೆ ಒಕ್ಕೂಟಕ್ಕಿಂತ ನಮ್ಮ ಒಕ್ಕೂಟದ ಹಾಲಿನ ಬೆಲೆ ಹೆಚ್ಚಳ

ಕೋಲಾರ,ಡಿ,೩-ಮೊದಲಿನಿಂದಲೂ ಹಾಲಿನ ಧರ ಇಳಿಕೆ ಮಾಡುವುದು ಸಂಪ್ರದಾಯ, ಒಂದು ರೂಪಾಯಿಯಷ್ಟೆ ಇಳಿಕೆ ಮಾಡಲಾಗಿದೆ, ಬೇರೆ ಹಾಲಿನ ಒಕ್ಕೂಟಕ್ಕೆ ಹೋಲಿಕೆ ಮಾಡಿದರೆ ನಮ್ಮದೇ ಹಾಲಿನ ಬೆಲೆ ಹೆಚ್ಚಾಗಿದೆ ಎಂದು ಮಾಲೂರು ಶಾಸಕ ಹಾಗೂ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹಾಲಿನ ಧರ ಏರಿಕೆಗೆ ಸ್ಪಷ್ಟನೆ ನೀಡಿದರು.
ತಾಲೂಕಿನ ನರಸಾಪುರದ ರಾಮಸಂದ್ರ ಬಳಿಯಿರುವ ಕಾನ್ಫಿಡೆಂಟ್ ಅಮೂನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಮುಖಂಡರ ಸಭೆಯ ನಂತರ ಮಾದ್ಯಮದವರೊಂದಿಗೆ ಅವರು ಮಾತನಾಡಿ ಕಳೆದ ೩ ತಿಂಗಳಿನಿಂದ ಬೆಂಗಳೂರು ಒಕ್ಕೂಟ ೫ ರೂಪಾಯಿ ಲೀಟರ್‌ಗೆ ಇಳಿಕೆ ಮಾಡಿದೆ, ನಾವು ಒಂದು ರೂಪಾಯಿ ಮಾತ್ರ ಇಳಿಕೆಯಾಗಿದ್ದು ಮೊದಲಿನಿಂದಲೂ ಹಾಲಿನ ಧರ ಇಳಿಕೆ ಮಾಡುವುದು ಸಂಪ್ರದಾಯವಾಗಿದೆ ಎಂದರು.
ನಮ್ಮಲ್ಲಿ ೪೦೦ ಕೋಟಿ ರೂಪಾಯಿ ಪ್ರಾಜೆಕ್ಟ್ ಮಾಡಲಾಗುತ್ತಿದೆ, ಅದು ಸರ್ಕಾರದ ಪ್ರಾಜೆಕ್ಟ್ ಅಲ್ಲ, ಒಕ್ಕೂಟದಿಂದ ಮಾಡಲಾಗುತ್ತಿರುವ ಯೋಜನೆ, ಪ್ರಮುಖವಾಗಿ ಎಂವಿಕೆ ಗೋಲ್ಡೆನ್ ಡೇರಿ, ಐಸ್ ಕ್ರೀಂ ಪ್ಲಾಂಟ್, ಸೋಲಾರ್ ಪ್ಲಾಂಟ್ ಮಾಡಲಾಗುತ್ತಿದೆ ಅದಕ್ಕೆಲ್ಲಾ ಹಣ ಹೊಂದಿಸಬೇಕಾಗಿದೆ, ಒಕ್ಕೂಟ ಲಾಭದಾಯಕ ಮುಂದುವರೆದಿದೆ ಅದರೆ ಒಕ್ಕೂಟದ ಅಭಿವೃದ್ದಿಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿದರು.
ಎಲ್ಲಾ ಒಕ್ಕೂಟಗಳಿಗಿಂತ ಉತ್ಪಾದಕರಿಗೆ ನಾವು ಹೆಚ್ಚಿನ ಹಣ ನೀಡುತ್ತಿದ್ದೇವೆ, ಮತ್ತೆ ಹಾಲಿನ ಧರ ಏರಿಕೆ ಮಾಡುವುದು ನಮ್ಮ ಸಂಪ್ರದಾಯ, ಹಸಿರು ಮೇವು ಬೆಳೆಯುವ ರೈತರಿಗೆ ಎಕರೆಗೆ ೩ ಸಾವಿರ ಕೊಡಲಾಗುತ್ತಿದೆ, ಇಂದು ಹಾಲು ಉತ್ಪಾದಕರಿಗೆ ಎಲ್ಲೂ ತೊಂದರೆಯಾಗಿಲ್ಲ, ಒಕ್ಕೂಟ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮನತೆಯಿಂದ ನಡೆಸಲಾಗುತ್ತಿದೆ ಎಂದರು.