ಬೇಮಳಖೇಡ ಅಪಘಾತ:ಉಡಮನಳ್ಳಿಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆಬಂಡೆಪ್ಪ ಖಾಶೆಂಪುರ್ ಸಾಂತ್ವನ

ಬೀದರ್ ನ 7: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ
ಬೇಮಳಖೇಡದ ಸರ್ಕಾರಿ ಪ್ರೌಢ ಶಾಲೆಯ ಬಳಿ ಶುಕ್ರವಾರ ಸಂಭವಿಸಿದ
ಅಪಘಾತದಲ್ಲಿ ಮೃತಪಟ್ಟ ಉಡಮನಳ್ಳಿಯ ಆರು ಜನ ಮಹಿಳಾ ಕಾರ್ಮಿಕರ
ಮನೆಗಳಿಗೆ ಮತ್ತು ಕಾಡವಾದದ ಒಬ್ಬ ಮಹಿಳಾ ಕಾರ್ಮಿಕರ ಮನೆಗೆ
ಮಾಜಿ ಸಚಿವ,ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಭೇಟಿ ನೀಡಿ, ಮೃತಮಹಿಳಾ ಕಾರ್ಮಿಕರ ಕುಟುಂಬದವರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು.
ಮೃತರ ಮನೆಗಳಿಗೆಭೇಟಿ ನೀಡುವ ಮುಂಚೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಜನರ ಅಹವಾಲು ಸ್ವೀಕರಿಸಿದರು.ಬೇಮಳಖೇಡದ ಬಳಿ ಸಂಭವಿಸಿದ ಅಪಘಾತ ನನಗೆ ನೋವುಂಟು ಮಾಡಿದೆ.ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ. ಗ್ರಾಮ ಪಂಚಾಯತಿಯಿಂದ ನೀಡುವ ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸುವ ಕೆಲಸ ಆಗಬೇಕಾಗಿದೆ. ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸುವಂತೆ ನಾನು
ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ನಡೆಯಬಾರದಿದ್ದ ಘಟನೆ ನಡೆದಿದೆ:
ಬೇಮಳಖೇಡದ ಬಳಿ ನಡೆಯಬಾರದಿದ್ದ ಘಟನೆ ನಡೆದು ಹೋಗಿದೆ.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನಾನು ಸಾಧ್ಯವಾದಷ್ಟು
ವೈಯಕ್ತಿಕ ಧನಸಹಾಯ ಮಾಡಿದ್ದೇನೆ. ಸರ್ಕಾರದಿಂದ ಪರಿಹಾರ
ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ಗಾಯಾಳುಗಳಿಗೂ
ವೈಯಕ್ತಿಕ ಧನಸಹಾಯ ಮಾಡುತ್ತೇನೆ. ಶಾಸಕನಾಗಿ ನಾನು ಏನೆಲ್ಲಾ ಸಹಾಯ ಮಾಡಲು ಸಾಧ್ಯವೋ ಎಲ್ಲಾ ರೀತಿಯ ಸಹಾಯ ಮಾಡುತ್ತೇನೆ.
ಮೃತರ ಕುಟುಂಬದಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾನು ವೈಯಕ್ತಿಕ
ಸಹಾಯ ಮಾಡುತ್ತೇನೆ. ಸರ್ಕಾರದಿಂದ ಕೂಡ ಸೌಲಭ್ಯಗಳನ್ನು
ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ಎಲ್ಲರೂ ಸೇರಿ ಆ ಕುಟುಂಬಗಳಿಗೆ
ಧೈರ್ಯ ತುಂಬುವ ಕೆಲಸ ಮಾಡಬೇಕಾಗುತ್ತದೆ ಎಂದು ಶಾಸಕ
ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.
ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿಯೇ ವಿಶ್ರಾಂತಿಪಡೆಯುತ್ತಿದ್ದ ಸುನೀಲ್ ಎಂಬ ಯುವಕನ ಮನೆಗೆ ಕೂಡ ಭೇಟಿ ನೀಡಿ,ಯುವಕನಿಗೆ ಬ್ರಿಮ್ಸ್ ನಲ್ಲಿಯೇ ಚಿಕಿತ್ಸೆ ವ್ಯವಸ್ಥೆ ಮಾಡಿಸಿಕೊಡುವ
ಭರವಸೆಯನ್ನು ಶಾಸಕರು ನೀಡಿದರು. ಬಳಿಕ ಕಾಡವಾದಕ್ಕೆ ಭೇಟಿ ನೀಡಿ,
ಬೇಮಳಖೇಡದ ಅಪಘಾತದಲ್ಲಿ ಮೃತಪಟ್ಟಿದ್ದ ಮಹಿಳೆಯ ಗಂಡನ
ಮನೆಯವರನ್ನು ಭೇಟಿಯಾಗಿ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಂತೋಷ ಎನ್ ಚೌಕಿ,ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಚಾಂಗಲೇರಾ,
ಮುಖಂಡರಾದ ಸಂತೋಷ ರಾಸೂರ, ಮಲ್ಲಪ್ಪಾ ಮನ್ನಾಎಖೇಳ್ಳಿ, ಬಾಬುರಾವ್ ಬೈರೆ, ಗುಂಡಪ್ಪ ಬಂಡಿಕಾರ್, ಸುಧಾಕರ್ ನಿಂಗ್ ನಾಯಕ, ರವಿ, ಶ್ರೀಮಂತ,ರಿಯಾಜ್, ವಿನೋದ್, ಅಶೋಕರೆಡ್ಡಿ ಗಾಳಿ, ಶಿವಕುಮಾರ್, ಅಶೋಕ್ ವಡ್ಡರ್,ಮಾರುತಿ ನಾಟೀಕರ್, ಗುಂಡಪ್ಪ ಕುರುಮಣ್ಣನವರ್, ಅಮೃತ್‍ಕುರಕೋಟಿ, ನರಸಿಂಗ್ ಬಂಟ್, ಬೀಮ್ಶಾ ಐನಳ್ಳಿ, ಅನಿಲ್, ಸಂತೋಷ,ಸೂರ್ಯಕಾಂತ್ ದಂಡಿ ಸೇರಿದಂತೆ ಅನೇಕರಿದ್ದರು.
ಬ್ರಿಮ್ಸ್ ಆಸ್ಪತ್ರೆಗೆ ಭೇಟಿ:
ಬೀದರ್ ನಗರದ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು ಬ್ರಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ಕೂಲಿ ಕಾರ್ಮಿಕರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಧೈರ್ಯದಿಂದ
ಇರುವಂತೆ ಬಂಡೆಪ್ಪ ಖಾಶೆಂಪುರ್‍ತಿಳಿಸಿದರು.
ಇದೇ ವೇಳೆ ಗಾಯಾಳುಗಳ ಕುಟುಂಬದವರಿಗೆ ವೈಯಕ್ತಿಕ
ಧನಸಹಾಯ ಮಾಡಿ, ಸರ್ಕಾರದಿಂದ ಉಚಿತ ಚಿಕಿತ್ಸೆ ಕೊಡಿಸುವ ಭರವಸೆ
ನೀಡಿದರು. ನಂತರ ಬ್ರಿಮ್ಸ್ ಆಸ್ಪತ್ರೆಯ ಮುಂಭಾಗದಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆವತಿಯಿಂದ ನಡೆಯುತ್ತಿರುವ ಬ್ರಿಮ್ಸ್ ಸ್ವಚ್ಚತಾ ಕರ್ಮಿಗಳ ಅಹೋರಾತ್ರಿನಿರಂತರ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಆಸ್ಪತ್ರೆಯ ಡಿಹೆಚ್‍ಒ ರತೀಕಾಂತ್ ಸ್ವಾಮಿ, ಶಿವಕುಮಾರ್‍ಶೆಟ್ಕರ್, ಡಾ. ಅಂತಪ್ಪ, ಸುರೇಶ ಹಿಪ್ಪಳಗಾವ್, ಡಾ. ಮೇಟಾರೆ, ಸಂತೋಷರಾಸೂರ, ಸಂತೋಷ ಎನ್ ಚೌಕಿ, ಮಲ್ಲಪ್ಪ ಮನ್ನಾಎಖೇಳ್ಳಿ, ಅಭಿ ಕಾಳೆ, ಅನಿಲ್ ಬೇಮಳಖೇಡ ಸೇರಿದಂತೆ ಅನೇಕರಿದ್ದರು. ಬಳಿಕ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ನಗರದ ವಾಲಿಶ್ರೀ ಆಸ್ಪತ್ರೆಗೆ ಭೇಟಿ ನೀಡಿ,ಬೇಮಳಖೇಡ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ
ಪಡೆಯುತ್ತಿರುವ ಆಟೋ ಚಾಲಕನ ಆರೋಗ್ಯ ವಿಚಾರಿಸಿ, ವೈಯಕ್ತಿಕ
ಧನಸಹಾಯ ಮಾಡಿದರು.