ಬೇಮಳಖೇಡಾದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರಾ ಅಭಿಯಾನ

ಬೀದರ,ಡಿ 11: ವಿಕಸಿತ ಭಾರತ ಸಂಕಲ್ಪ ಯಾತ್ರಾ ಅಭಿಯಾನದ ನಿಮಿತ್ಯ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೇಮಳಖೇಡಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆಯವರು ಪಾಲ್ಗೊಂಡರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಖೂಬಾ ಅವರು ಹತ್ತು ವರ್ಷಗಳಲ್ಲಿ ಏನು ಅಭಿವೃದ್ದಿ ಮಾಡಿದ್ದೇವೆ ಎಂದು ತಿಳಿಸಿ, ಲೆಕ್ಕ ಕೊಡಲು ಈ ವಿಕಸಿತ ಯಾತ್ರಾ ಹಮ್ಮಿಕೊಳ್ಳಲಾಗಿದೆ, ಮೋದಿಯವರು ಎಂದು ಜಾತಿ, ಧರ್ಮ ನೋಡಿಲ್ಲ. ಮೋದಿಯವರ ಪ್ರಕಾರ ಜಾತಿಯೆಂದರೆ ಎಲ್ಲಧರ್ಮದ ಬಡವರು, ರೈತರು, ಮಹಿಳೆಯರು ಮತ್ತು ಯುವಕರು.
2047ರಲ್ಲಿ ದೇಶವು ಸ್ವಾತಂತ್ರ್ಯಗೊಂಡು 100 ವರ್ಷಗಳು ಆಗುವ ಹಿನ್ನಲೆಯಲ್ಲಿ ಅಲ್ಲಿಯವರೆಗೆ ನಮ್ಮ ಜನರು ಎಲ್ಲಾ ರಂಗಗಳಲ್ಲಿ ಅಭಿವೃದ್ದಿ ಹೊಂದಿಬೇಕು, ನಮ್ಮ ಅರ್ಥ ವ್ಯವಸ್ಥೆ ವಿಶ್ವದ ಬಲಿಷ್ಠ ಅರ್ಥ ವ್ಯವಸ್ಥೆಯಾಗಿಸಬೆಕೆನ್ನುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು, ಇದರ ಜೊತೆಗೆ ನಮ್ಮ ಸಂಸ್ಕøತಿಯ ಅಭಿವೃದ್ದಿಗಾಗಿ, ನಮ್ಮಲ್ಲಿಯ ಗುಲಾಮಗಿರಿ ಮನಸ್ಥಿತಿಯನ್ನು ಹೊಗಲಾಡಿಸುವ ಸಂಕಲ್ಪ ಮಾಡಬೇಕಾಗಿದೆ ಎಂದು ತಿಳಿಸಿದರು.
ನಮ್ಮ ಸರ್ಕಾರದಿಂದ ಕ್ಷೇತ್ರದಲ್ಲಿ 3.55 ಲಕ್ಷ ಜನರಿಗೆ ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್, ಎಲ್ಲಾ ಬಡವರಿಗೆ ಉಚಿತವಾಗಿ 5 ಕೆ.ಜಿ. ಅಕ್ಕಿ, 5 ಲಕ್ಷದವರೆಗೆ ಆಯುಷ್ಮಾನ ಭಾರತ ಯೋಜನೆಯಡಿ ಉಚಿತ ಚಿಕಿತ್ಸೆ, ಪಿ.ಎಮ್.ಕಿಸಾನ್ ಅಡಿ ವರ್ಷಕ್ಕೆ 6 ಸಾವಿರ ರೂಪಾಯಿ ಪ್ರೋತ್ಸಾಹ ಧನ, ಮುಂತಾದ ಲಾಭಗಳು ಯಾವುದೇ ಜಾತಿ ಜನಾಂಗ ನೊಡದೇ ಎಲ್ಲರಿಗೂ ನೀಡುತ್ತಿದ್ದೇವೆ.ಆದರೆ ಸಿದ್ದರಾಮಯ್ಯನವರ ಸರ್ಕಾರ ರೈತರಿಗೆ ನೀಡುತ್ತಿದ್ದ 4 ಸಾವಿರ ಹಣ,ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಬಂದ ಮಾಡಿದೆ, ಯಾವುದೇ ಅಭಿವೃದ್ದಿ ಕೆಲಸಗಳು ಮಾಡದೇಕೇವಲ ದ್ವೇಷದ ರಾಜಕಾರಣ ಮಾಡುತ್ತಿದೆ. ಇಂತಹ ಸರ್ಕಾರ ತುಂಬಾ ದಿನ ನಡೆಯಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಬೀದರ ಕ್ಷೇತ್ರದ ಅಭಿವೃದ್ದಿಗೆ ನಮ್ಮ ಸಂಸದರ ಶ್ರಮದ ಫಲವಾಗಿ ಇಂದು ನವು ಹತ್ತಾರು ರೈಲುಗಳು, ಹೆದ್ದಾರಿಗಳು ನೋಡುತ್ತಿದ್ದೇವೆ, ಏರಪೋರ್ಟ ಆಗಿದೆ, ಸೈನಿಕ್ ಶಾಲೆ ಮಂಜೂರಿ ಮಾಡಿಸಿಕೊಂಡಿದ್ದಾರೆ, ಆದ್ದರಿಂದ 3ನೇ ಬಾರಿಯೂ ತಾವೆಲ್ಲರೂ ಮೋದಿಯವರಿಗೆ, ಖೂಬಾರವರಿಗೆ ಆಶೀರ್ವಾದಿಸಬೇಕೆಂದು ಎಲ್ಲರಲ್ಲಿ ವಿನಂತಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ 150 ಜನರಿಗೆ ಉಚಿತ ಗ್ಯಾಸ, 325 ಜನರಿಗೆ ಆಯುಷ್ಮಾನ ಭಾರತ ಕಾರ್ಡ ವಿತರಣೆ, ಸರಸ್ವತಿ ಎಂಬುವವರಿಗೆ ಅವರ ಪತಿ ನಿಧನರಾದ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ 2 ಲಕ್ಷದ ಚೆಕ್ ಹಸ್ತಾಂತರಿಸಲಾಯಿತು. ಇದರ ಜೊತೆಗೆ ಎಸ್.ಬಿ.ಐ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಸಾಲದ ಚೆಕ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷಮಂಜುನಾಥ ಸುಣಗಾರ, ಗ್ರಾಮದ ಪ್ರಮುಖರಾದ ಬಸವರಾಜ ಚಟ್ನಳ್ಳಿ, ಸೂರ್ಯಕಾಂತ ಬೀರನಳ್ಳಿ, ರೇವಪ್ಪ ಮುದ್ದಾ, ಪಕ್ಷದ ಮುಖಂಡರಾದ ಜಗನ್ನಾಥ ಬೂರಿ, ಸುರೇಶ ಮಾಶೆಟ್ಟಿ, ಘಾಳೆಪ್ಪ ಚಟ್ನಳ್ಳಿ, ಬಸವರಾಜ ಯದಲಾಪೂರ, ಪ್ರಶಾಂತ ಸಿಂದೋಲ್, ಬ್ಯಾಂಕ್ ಮುಖ್ಯಸ್ಥರಾದ ಸಂಜಿವಕುಮಾರ, ರಾಮರಾವ, ಸಾತ್ವಿಕ್, ಇತರರು ಉಪಸ್ಥಿತರಿದ್ದರು.