ಬೇಬಿಕಾರ್ನ್ ಬೋಂಡಾ

ಬೇಕಾಗುವ ಪದಾರ್ಥಗಳು:
ಮೈದಾಹಿಟ್ಟು – ೧ ಲೋಟ
ಉಪ್ಪು – ರುಚಿಗೆ ತಕ್ಕಷ್ಟು
ಸೋಡಾ – ಚಿಟಿಕೆ
ಅಚ್ಚಖಾರದಪುಡಿ – ೧ ಚಮಚ
ಬೆಳ್ಳುಳ್ಳಿ – ಸ್ವಲ್ಪ
ಬೇಬಿಕಾರ್ನ್ – ರುಚಿಗೆ ತಕ್ಕಷ್ಟು
ಎಣ್ಣೆ – ಕರಿಯಲು
ವಿಧಾನ: ಮೈದಾಹಿಟ್ಟಿಗೆ ಉಪ್ಪು, ಸೋಡಾ ಚಿಕ್ಕದಾಗಿ ಹೆಚ್ಚಿದ ಬೆಳ್ಳುಳ್ಳಿ, ಅಚ್ಚಖಾರದಪುಡಿ, ತಕ್ಕಷ್ಟು ನೀರು ಮತ್ತು ಕಾಯಿಸಿದ ಎಣ್ಣೆ ಸ್ವಲ್ಪ ಹಾಕಿ, ಕಲೆಸಿ, ಬೇಬಿಕಾರ್ನ್ ಅದ್ದಿ, ಕರಿದು ಸೇವಿಸಬಹುದು.