ಬೇನಚಿಂಚೋಳಿ: ಪ್ರೌಢ ಶಾಲೆಯ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆ

ಹುಮನಾಬಾದ :ನ.19:ಬೇನಚಿಂಚೋಳಿ ಪ್ರೌಢ ಶಾಲೆಯ ಮಕ್ಕಳು ಬೀದರ್ ಡಯಟ್ ನಲ್ಲಿ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆ ಅಡಿ ನಡೆದ ಜಿಲ್ಲಾ ಮಟ್ಟದ ಜಾನಪದ ನೃತ್ಯ ಹಾಗೂ ಪಾತ್ರಾಭಿನಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಎರಡು ತಂಡದ ಮಕ್ಕಳು ನವಂಬರ್ 22ರಂದು ಧಾರವಾದ ಡಯಟ್ ನಲ್ಲಿ ನಡೆಯಲಿರುವ ರಾಜ್ಯಮಟ್ಟದ ಜಾನಪದ ನೃತ್ಯ ಹಾಗೂ ಪಾತ್ರಾಭಿನಯ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಆಯ್ಕೆಯಾದ ಎಲ್ಲ ಮಕ್ಕಳಿಗೆ ಹಾಗೂ ಮಾರ್ಗದರ್ಶಿ ಶಿಕ್ಷಕರಾದ ಡಾ.. ಸಾರಿಕಾ ಎಸ್ ಗಂಗಾ ಹಾಗೂ ಶ್ರೀಮತಿ ಬಾಯಿರೆಡ್ಡಿ ಇವರಿಗೆ ಶಾಲೆಯ ಮುಖ್ಯ ಗುರುಗಳಾದ ಶ್ರೀ ಅರ್ಜುನ್ ಕಾಂಬಳೆ ಹಾಗೂ ಸಿಬ್ಬಂದಿ ವರ್ಗದವರಾದ ರಮೇಶ್ ಸಜ್ಜನ್, ರಾಜೇಶ್, ರೀಟಾ ಎಲಿನ್, ರೇಣುಕಾ, ಜೀವನ್ ಪ್ರಕಾಶ್, ಹಾಗೂ ಅಂಜಿ ರೆಡ್ಡಿ ಇವರು ಅಭಿನಂದಿಸಿದ್ದಾರೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮಕ್ಕಳ ವಿವರ ಇಂತಿದೆ : ಜಾನಪದ ನೃತ್ಯದಲ್ಲಿ ಅಂಕಿತಾ, ಅಕ್ಷತಾ, ವಿಜಯಲಕ್ಷ್ಮೀ, ಭಾಗ್ಯಶ್ರೀ ವರ್ಷಾ, ಭಾಗ್ಯಶ್ರೀ ಆಯ್ಕೆಯಾಗಿದ್ದಾರೆ. ಪಾತ್ರಾಭಿನಯ ಸ್ಪರ್ಧೆಯಲ್ಲಿ ಭಾಗ್ಯಶ್ರೀ , ದೇವಿಕಾ, ಲಕ್ಷ್ಮೀ, ಭಾಗ್ಯಶ್ರೀ ಹಾಗೂ ಪ್ರೀಯಾ ಆಯ್ಕೆಯಾಗಿದ್ದಾರೆ.