ಬೇಥನಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಕಿರಿಯ ಸಂಪುಟ ಸದಸ್ಯರ ನೇಮಕ

ಕಲಬುರಗಿ,ಜು.6-ಬೇಥನಿ ಇಂಗ್ಲೀಷ್ ಮಾಧ್ಯಮ ಹಿರಿಯ ಶಾಲೆಯಲ್ಲಿ ಕಿರಿಯ ಸಂಪುಟ ಸದಸ್ಯರನ್ನು ನೇಮಕ ಮಾಡಲಾಯಿತು. ಬಾಲಕರ ಮುಖ್ಯಸ್ಥನಾಗಿ ಶ್ರೀಶೈಲ, ಬಾಲಕಿಯರ ಮುಖ್ಯಸ್ಥಳಾಗಿ ಸಿದ್ದಿ, ಶಿಸ್ತು ಸಮಿತಿ ನಾಯಕರಾಗಿ ಕಿರಣ್, ವೇದಾಂತ, ರಕ್ಷಾ, ಸಂಸ್ಕøತಿ, ಆರೋಗ್ಯ ಮತ್ತು ಸ್ವಚ್ಛತಾ ಸಮಿತಿ ಮುಖ್ಯಸ್ಥರಾಗಿ ಸಾನಿಧ್ಯ, ವಾರಿಧಿ, ಪ್ರೀತಮ್,ಶಿವಪ್ರಸಾದ, ಗ್ರೀನ್ ಹೌಸ್ ನಾಯಕರಾಗಿ ವೈಷ್ಣವಿ, ಸಮೃದ್ಧಾ ಜೋಗನ್, ಮರೂನ್ ಹೌಸ್ ನಾಕಯರಾಗಿ ಆರನಾ, ಆದಿತ್ಯಾ, ಆರೇಂಜ್ ಹೌಸ್ ನಾಯಕರಾಗಿ ಪಲ್ಲವಿ, ಅವರವ್, ಬ್ಲ್ಯೂ ಹೌಸ್ ನಾಯಕರಾಗಿ ಭಾಗ್ಯಶ್ರೀ, ಜೋಶು ಅವರು ಆಯ್ಕೆಯಾದರು. ಶಾಲೆಯ ಮುಖ್ಯೋಪಾಧ್ಯಯರು, ಶಿಕ್ಷಕರು, ಸಿಬ್ಬಂದಿಗಳು ಮತ್ತು ಪಾಲಕರು ಇದ್ದರು.