ಬೇಡ ಜಂಗಮ ಸತ್ಯ ಪ್ರತಿಪಾದನಾ ಸತ್ಯಾಗ್ರಹಕ್ಕೆ ಬೆಂಬಲ

ಚಡಚಣ, ಆ.1-ಪಟ್ಟಣದ ವಿರಕ್ತ ಮಠದಲ್ಲಿ ಶನಿವಾರ ನಡೆದ ಚಡಚಣ ಹಾಗೂ ಸುತ್ತಲಿನ ಬೇಡ ಜಂಗಮ ಬಾಂಧವರು ಹಮ್ಮಿಕೊಳ್ಳಲಾದ ಬೆಂಗಳೂರಿನ ಫ್ರೀಡಮ್ ಪಾರ್ಕನಲ್ಲಿ ಡಾ.ಬಿ.ಡಿ.ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಬೇಡಜಂಗಮ ಸತ್ಯಪ್ರತಿಪಾದನಾ ಸತ್ಯಾಗ್ರಹಕ್ಕೆ ಬೆಂಬಲಿಸುವದಾಗಿ ಹೇಳಿದರು.
ಬೇಡ ಜಂಗಮರ ಸಲುವಾಗಿ ಹಗಲಿರುಳೆನ್ನದೆ ಬೇಡ ಜಂಗಮ (ಎಸ್.ಸಿ.) ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸುವವರೆಗೆ ಸರಕಾರದ ಮನವಲಿಸಲು ನಡೆದ ಸತ್ಯಪ್ರತಿಪಾದನಾ ಸತ್ಯಾಗ್ರಹಕ್ಕೆ ನಮ್ಮ ಸಹಕಾರ ಸದಾ ಇರುತ್ತದೆ ಎಂದು ಚಡಚಣದ ವಿರಕ್ತಮಠಾಧಿಶರಾದ ಶ್ರೀ ಮನಿಪ್ರ ಷಡಕ್ಷರ ಮಲ್ಲಿಕಾರ್ಜುನ ಶ್ರೀಗಳು ಹೇಳಿದರು.
ಹಾವಿನಾಳ ಹಾಗು ಹತ್ತಳ್ಳಿ ಹಿರೇಮಠದ ಶ್ರೀ ಮನಿಪ್ರ ಷಟಸ್ಥಳ ಬ್ರಹ್ಮ ಶ್ರೀಗುರುಪಾದೇಶ್ವರ ಶ್ರೀಗಳು ಮಾತನಾಡಿ ಸ್ವಾತಂತ್ರ ನಂತರದ ದಿನಗಳಿಂದ ಇಲ್ಲಯವರೆಗು ನಮ್ಮ ಬೇಡ ಜಂಗಮ(ಜಂಗಮ) ಸಮುದಾಯಕ್ಕೆ ನಮ್ಮ ರಾಜ್ಯ ಸರಕಾರದಿಂದ (ಎಸ್.ಸಿ.) ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡದೆ ಅನ್ಯಾವಾಗಿದೆ ಯಾವುದೋ ಧರ್ಮದ ಹೆಸರಲ್ಲಿ ಅದನ್ನೆ ಜಾತಿ ಎಂದು ಉದಾಹರಣೆಗೆ ಲಿಂಗಾಯತರು,ವೀರಶೈವ ಲಿಂಗಯತರು ಎಂದು ಜಾತಿ ಪ್ರಮಾಣಪತ್ರ ವಿತರಿಸಲಾಗುತ್ತಿದೆ. ಅದರಿಂದ ನಮ್ಮ ಸಮಾಜದವರಿಗೆ ರಾಜ್ಯ ಸರಕಾರದ ಸೌಲಭ್ಯ ದೊರಕಿದೆಯೆ ವಿನಃ ಕೇಂದ್ರ ಸರಕಾರದ ಸೌಲಭ್ಯ ದೊರಕಿಲ್ಲ ಏಕೆಂದರೆ ಈ ಎರಡು ಜಾತಿಗಳ ಅಂದರೆ ಲಿಂಗಾಯತರು,ವೀರಶೈವ ಲಿಂಗಯತರು ಹೆಸರು ಕೇಂದ್ರದಲ್ಲಿ ಇಲ್ಲದೆ ಇರುವದರಿಂದ ನಾವು ಆರ್ಥೀಕವಾಗಿ ಸಾಮಾಜಿಕವಾಗಿ ಹಿಂದುಳಿದಿದ್ದರು ಕೇಂದ್ರದ ಸೌಲಭ್ಯ ಪಡೆದುಕೊಳ್ಳಲು ಸಾಮಾನ್ಯ ಅಭ್ಯರ್ಥಿ ಎಂದು ನಮ್ಮ ಬೇಡ ಜಂಗಮ ಸಮಾಜಕ್ಕೆ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದರು.
ರಾಜ್ಯ ಸರಕಾರ ಎಚ್ಚತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರಇದರ ಫಲ ಅನುಭವಿಸಬೇಕಾಗುತ್ತದೆ ಎಂದರು.
ಈಸಂಧರ್ಬದಲ್ಲಿ ಸೋಮು ಹಿರೇಮಠ,ಡಾ.ಅಣ್ಣಯ್ಯ ಹಿರೇಮಠ,ವಿಶ್ವನಾಥ ಮಠÀಪತಿ,ಎಸ್.ಸಿ.ಹಿರೇಮಠ,ಜಿ.ಡಿ.ಹಿರೇಮಠ,ಎಸ್.ಐ.ವಸ್ರದ,ಎಮ್.ಎನ್.ಹಿರೇಮಠ,ರಾಜಶೇಖರ ಡೋಣಜಮಠ,ಸೋಮಯ್ಯ ಹಿರೇಮಠ,ಬಸಯ್ಯ ಚೌಡೇಶ್ವರಿಮಠ,ಕಿರಣ ಹಿರೇಮಠ,ಸಿದ್ದಯ್ಯ ಹಿರೇಮಠ ಇನ್ನಿತರರು ಇದ್ದರು.