ಬೇಡ ಜಂಗಮ ಸಂವಿಧಾನಾತ್ಮಕ ಹಕ್ಕಿಗಾಗಿ ರಾಜ್ಯಮಟ್ಟದ ಸಭೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ 22: ಬೇಡ ಜಂಗಮ ಸಮುದಾಯಕ್ಕೆ ಸಂವಿಧಾನದ ಅಡಿಯಲ್ಲಿ ನೀಡುವ ಹಕ್ಕುಗಳನ್ನು ನೀಡುವಂತೆ ಸರ್ಕಾರದ ಮೇಲೆ ಒತ್ತಡತರಲು ಕರ್ನಾಟಕ ರಾಜ್ಯ ಬೇಡ ಜಂಗಮ ಸಮಾಜ ಚಿಂತನಾ ಸಭೆ ಹಮ್ಮಿಕೊಂಡಿದೆ ಎಂದು ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ.ಕಾಶಿನಾಥಯ್ಯ ಹೇಳಿದರು.
ಸ್ಥಳೀಯ ಬಯಲು ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನ ಉದ್ದ ಅಗಲಕ್ಕೂ ಸಮುದಾಯದ ಪೂಜ್ಯರ ನೇತೃತ್ವದಲ್ಲಿ ಇದೇ 26ರಂದು ಕೊಟ್ಟೂರುಸ್ವಾಮಿ ಮಠದಲ್ಲಿ ರಾಜ್ಯ ಮಟ್ಟದ ಚಿಂತನಾ ಸಭೆ ಆಯೋಜಿಸಿದೆ ರಾಜ್ಯದ ಎಲ್ಲಾ ಪ್ರದೇಶದ ಸಮುದಾಯದ ಮುಖಂಡರು ಭಾಗವಹಿಸಿ ಸಮುದಾಯದ ಬೇಡಿಕೆಗಳನ್ನು ಚಿಂತಿಸಿ ಸರ್ಕಾರದ ಮುಖ್ಯ ಮಂತ್ರಿಗಳಿಗೆ ಮನವಿಯನ್ನು  ಸಲ್ಲಿಸಲು ಹಾಗೂ ಭೇಟಿಗೆ ಪೂರ್ವದಲ್ಲಿ ರೂಪುರೇಷೆಗಳನ್ನು ಸಿದ್ದಪಡಿಸಲಾಗುವದು ಎಂದರು.
ಬೆಳಿಗ್ಗೆ 10.30ಕ್ಕೆ ನಡೆಯುವ ಸಭೆಯಲ್ಲಿ ರಾಜ್ಯದ ವಿವಿಧ ಪ್ರದೇಶದ 30ಕ್ಕೂ ಹೆಚ್ಚು ಮಠಾದೀಶ್ವರ ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಕೊಳಗುಮಠದ ಶಾಂತ ವೀರ ಸ್ವಾಮಿಗಳು, ಕಲ್ಯಾಣಮಠದ ಚನ್ನವೀರಸ್ವಾಮಿಗಳು, ಕೊಟ್ಟೂರುಸ್ವಾಮಿ ಮಠದ ಡಾ.ಸಂಗನಬಸವ ಸ್ವಾಮಿಗಳು, ನಂದಿಪುರದ ಮಹೇಶ್ವರಸ್ವಾಮಿಗಳು‌ ಸೇರಿದಂತೆ ಎಲ್ಲಾ ಜಿಲ್ಲೆಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ಸಂವಿಧಾನದಲ್ಲಿ ಸಮುದಾಯಕ್ಕೆ ನೀಡಿದ ಸವಲತ್ತುಗಳನ್ನು ಪಡೆಯಲು ನಮ್ಮ ಮನವಿ ಸಲ್ಲಿಸಿ ಅದು ಸಾದ್ಯವಾಗದಿದ್ದಲ್ಲಿ ಹೋರಾಟ ಕ್ಕೆ ಮುಂದಾಗಲು ಸಹ ಚಿಂತನೆ ಮಾಡಲಾಗುವುದು. ಸಮುದಾಯವನ್ನು ಚಾತಿ ಮೀಸಲಾತಿ ಪಡೆಯುವುದು ನಮ್ಮ ಮೊದಲ ಆದ್ಯತೆಯಾಗಲಿದೆ ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಎನ್.ಎಮ್.ರವಿಶಂಕರ್, ಖಚಾಂಚಿ ಸಿದ್ದಲಿಂಗಯ್ಯ ಸೂರಿಮಠ, ಎಸ್.ಎಂ.ರವಿಶಂಕರ, ಎಸ್.ಎಂ.ರವಿಕಾಂತಯ್ಯ, ಎಸ್.ಎಂ.ವೀರಯ್ಯ, ಜಿ.ಎಂ.ಮಂಜುನಾಥಸ್ವಾಮಿ, ಎಸ್.ಎಂ.ಶಶಿಧರಯ್ಯ ಪಾಲ್ಗೊಂಡಿದ್ದರು.