ಬೇಡ ಜಂಗಮರ ಹೋರಾಟಕ್ಕೆ ವಕೀಲರ ಬೆಂಬಲ

ಭಾಲ್ಕಿ: ಜು.27:ಜ್ಯಾತಿ ಪ್ರಮಾಣ ಪತ್ರ ಪಡೆಯುವ ನಿಟ್ಟಿನಲ್ಲಿ ಸುಮಾರು ದಿವಸಗಳಿಂದ ಹೋರಾಟ ನಡೆಸುತ್ತಿರುವ ಬೇಡಜಂಗಮರ ಹೋರಾಟಕ್ಕೆ ಭಾಲ್ಕಿಯ ವಕೀಲರು ಬೆಂಬಲ ವ್ಯಕ್ತ ಪಡಿಸಿದ್ದಾರೆ. ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ಭಾಲ್ಕಿ ವಕೀರಲ ತಂಡದವರು, ಬೇಡ ಜಂಗಮರ ಬೇಡಿಕೆ ನಿಜವಾದ ಬೇಡಿಕೆಯಾಗಿದೆ. ಸರ್ಕಾರ ಇವರ ಬೇಡಿಕೆ ತಕ್ಷಣವೇ ಈಡೇರಿಸುವ ಕಾರ್ಯ ಮಾಡಬೇಕು. ಈ ಹೋರಾಟಕ್ಕೆ ತಾಲೂಕಿನ ಎಲ್ಲಾ ವಕೀಲರು ಸ್ವಯಂಪ್ರೇರಿತವಾಗಿ ಬೆಂಬಲ ವ್ಯಕ್ತ ಪಡೆಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮಹೇಶ ರಾಚೊಟ್ಟೆ, ಆನಂದ ಮಠಪತಿ, ಮಹಾದೇವ ಕಾಶಿಸ್ವಾಮಿ, ವಿಜಯಕುಮಾರ ಭೊರಾಳೆ, ಸೂರ್ಯಕಾಂತ ಪಾಟೀಲ, ನಾಗನಾಥ ಪಾಟೀಲ, ಧನರಾಜ ಸೊನಾಳೆ, ಸುರೇಂದ್ರ ಶಾಸ್ತ್ರಿ ಸೇರಿದಂತೆ ಮುಂತಾದವರು ಇದ್ದರು.