ಬೇಡ ಜಂಗಮರ ಮೀಸಲಾತಿಗಾಗಿ ಶಾಸಕರಿಗೆ ಮನವಿ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಸೆ.12: ಬೇಡ ಜಂಗಮ ಸಮಾಜಕ್ಕೆ ಮೀಸಲಾತಿಗೆ ಬೆಂಬಲ ನೀಡಬೇಕೆಂದು ಶಾಸಕರಾದ ಎಸ್. ಭೀಮಾನಾಯ್ಕ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಅಯ್ಯನಹಳ್ಳಿ ರಂಭಾಪುರಿ ಶಾಖಾ ಮಠದಲ್ಲಿ ಶ್ರೀ ಮಹೇಶ್ವರ ಸ್ವಾಮೀಜಿ ನುಗ್ಗಿನಹಳ್ಳಿ ಹಿರೇಮಠ ಇವರ ನೇತೃತ್ವದಲ್ಲಿ ತಾಲೂಕು ಬೇಡ ಜಂಗಮ ಘಟಕದ ವತಿಯಿಂದ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಸಂವಿಧಾನಬದ್ಧ ಹೋರಾಟ ಸತ್ಯಾಗ್ರಹಕ್ಕೆ ತಾವುಗಳು ಬೆಂಬಲ ನೀಡುವುದರ ಜೊತೆಗೆ ಇದೇ 12ರಂದು ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಬೇಡ ಜಂಗಮರಿಗೆ ಸಂವಿಧಾನಬದ್ಧವಾಗಿ ಈಗಾಗಲೇ ದೊರೆತಿರುವ ಜಾತಿ ಪ್ರಮಾಣ ಪತ್ರದ ಹಕ್ಕಿನ  ಪರವಾಗಿ ಹಾಗೂ ಪೂರಕವಾಗಿ ಅಧಿವೇಶನದ ಸಮಯದಲ್ಲಿ ಮಾತನಾಡುವ ಮೂಲಕ ಸರ್ಕಾರದ ಗಮನಕ್ಕೆ ತರಬೇಕು, ಮುಖ್ಯಮಂತ್ರಿಗಳಿಗೆ, ಸಮಾಜ ಕಲ್ಯಾಣ ಸಚಿವರಿಗೆ ಹಾಗೂ ಸಮಾಜ ಕಲ್ಯಾಣ ಪ್ರಧಾನ ಕಾರ್ಯದರ್ಶಿಗಳಿಗೆ ನಮ್ಮ ಸತ್ಯ ಪ್ರತಿಪಾದನಾ ಮನವಿಯಲ್ಲಿರುವ ಸತ್ಯ ಮತ್ತು ಕಾನೂನು ಬದ್ಧ ಅಂಶಗಳನ್ನು ಬೆಂಬಲಿಸಿ ಹಾಗೂ ಬೇಡ ಜಂಗಮ ಅನುಸೂಚಿತ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಬೇಡ ಜಂಗಮ ಅಧ್ಯಕ್ಷರಾದ ಅಡಿಕಿ ಮಂಜುನಾಥ್, ಅಯ್ಯನಹಳ್ಳಿ ಘಟಕದ ಬೇಡ ಜಂಗಮದ ಅಧ್ಯಕ್ಷರಾದ ಎಂ.ಜಿ ಕೊಟ್ರಯ್ಯ, ಸಮಾಜದ ಮುಖಂಡರಾದ ವೀರಯ್ಯ ಮಠದ, ಸಿಎಂ ವಿನಯ್ ಕುಮಾರ್, ಭೋಜರಾಜ, ನಾಗರಾಜ, ಇನ್ನು ಸಮಾಜದವರು ಉಪಸ್ಥಿತರಿದ್ದರು.

Attachments area