ಬೇಡ ಜಂಗಮರ ಪ್ರತಿಭಟನೆಗೆ ಮಠಾಧೀಶರು ಭಾಗವಹಿಸಲು ಮನವಿ

ಸಿರವಾರ.ಜು.೨೦- ಬೇಡ ಜಂಗಮರಿಗೆ ಎಸ್‌ಸಿ ಪ್ರಮಾಣ ಪತ್ರವನ್ನು ನೀಡುವಂತೆ ಇದೇ ತಿಂಗಳು ೨೩ ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ ಜರುಗುವ ಸತ್ತ ಪ್ರತಿಪಾದನ ಸತ್ಯಗ್ರಹಕ್ಕೆ ಬೆಂಬಲ ಸೂಚಿಸಿ ಜಿಲ್ಲೆಯ ಎಲ್ಲಾ ಮಠಾಧೀಶರು ಭಾಗವಹಿಸುವ ಮೂಲಕ ಆಶಿರ್ವಾದ ನೀಡಬೇಕು ಎಂದು ಬೇಡ ಜಂಗಮ ಸಮಾಜದ ಸಿರವಾರ ತಾಲೂಕ ಅಧ್ಯಕ್ಷ ದೇವರಾಜ ಹೀರೆಮಠ ಮನವಿ ಮಾಡಿಕೊಂಡಿದ್ದಾರೆ. ಪಟ್ಟಣದಲ್ಲಿ ಸಂಜೆವಾಣಿಯೊಂದಿಗೆ ಮಾತನಾಡಿದ ಅವರು ಎಸ್‌ಸಿ ಪ್ರಮಾಣ ಪತ್ರ ಪಡೆಯಲು ಈಗ ಹೋರಾಟ ಹಮ್ಮಿಕೊಳಲಾಗಿದೆ.
ಆದರೂ ಸಹ ಸರ್ಕಾರ ಜಗ್ಗುತ್ತಿಲ್ಲ ನಮ್ಮ ಸಮಾಜ ಮುಖಂ ಸಂಖ್ಯೆಯಲ್ಲಿ ಜನರು ಹಾಗೂ ವಿವಿಧ ಮಠಾಧೀಶರು ಭಾಗವಹಿಸಿ ಯಶಸ್ವಿಗೊಳಿಸಿ ಎಂದರು.