ಬೇಡ ಜಂಗಮರು- ವೀರಶೈವ ಲಿಂಗಾಯರು ಎಸ್‌ಸಿ ಪಟ್ಟಿಗೆ ಸೇರ್ಪಡೆಗೆ ವಿರೋಧಿಸಿ ಪ್ರತಿಭಟನೆ

ಸಿರವಾರ.ಜು.೨೬- ಬೇಡ ಜಂಗಮ, ವೀರಶೈವ ಲಿಂಗಾಯತ ಸಮಾಜದವರಿಗೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಬೇಡ, ಪ್ರಮಾಣ ಪತ್ರ ನೀಡ ಬಾರದು ಎಂದು ಪರಿಶಿಷ್ಟ ಜಾತಿ ಮೀಸಲಾತಿ ಸಂರಕ್ಷಣಾ ಸಮಿತಿ, ವಿವಿಧ ದಲಿತ ಪರ ಸಂಘಟಗಳು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಮಾಡಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾವಣೆ ಗೊಂಡ ವಿವಿಧ ದಲಿತ ಸಂಘಟನೆಗಳ ಪದಾದಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು, ರಾಜ್ಯ ಸರಕಾರ ಬೇಡ ಜಂಗಮರಿಗೆ, ವೀರಶೈವ ಲಿಂಗಾಯತರಿಗೆ ಎಸ್ .ಸಿ ಮೀಸಲಾತಿ ನೀಡಬಾರದು, ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಲು ಅನೇಕ ದಿನಗಳಿಂದ ಹೋರಾಟ ನಡೆಯುತ್ತಿದೆ. ಇದಕ್ಕೆ ಕ್ಯಾರೆ ಎನ್ನದೆ ಕಾಂಗ್ರೆಸ್ ಪಕ್ಷದ ಮುಖಂಡರಾದ ರವಿಬೋಸರಾಜು ಬೇಡ ಜಂಗಮ ಹೋರಾಟದಲ್ಲಿ ಕಾಣಿಸಿಕೊಂಡಿದ್ದು ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಾಗುವುದು ಎಂದು ಧಿಕ್ಕಾರ ಹಾಕಿದರು.
ಈ ಕುರಿತು ಬಸವರಾಜ ಭಂಡಾರಿ, ಅಬ್ರಾಹಂ ಹೊನ್ನಟಗಿ, ಮಲ್ಲೇಶ ಮಾಚನೂರು, ಅರಳಪ್ಪ, ವಿಜಯರಾಣಿ ಮಾತನಾಡಿದರು. ಬಸವೇಶ್ವರ ವೃತ್ತದಲ್ಲಿ ಧರಣಿ ಮಾಡಿ, ಪರಿಶಿಷ್ಟ ಜಾತಿ ಒಳಪಡುವ ಲಂಬಾಣಿ, ಕೂರವ, ಹಗಲು ವೇಷಗಾರರು ತಮ ಕುಲ ಕಸಬು ಪ್ರರ್ದಶನ ಮೂಲಕ ಮೆರವಣಿಗೆ ಮೂಲಕ ಪಿಡಬ್ಲ್ಯೂ ಡಿ ಕ್ಯಾಂಪಿನ ಮುಂಭಾಗದಲ್ಲಿ ಕೇಲ ಕಾಲ ಮಾನವ ಸರಪಳಿ ನಿರ್ಮಾಣ ಮಾಡಿ ಪ್ರತಿಭಟನೆ ಮಾಡಿ ತಹಸೀಲ್ದಾರ ಮೂಲಕ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜಪ್ಪ ಹೊನ್ನಟಗಿ, ಲಂಕೇಶ ಮರಾಟ, ಎಲ್.ವಿ.ಸುರೇಶ,ಎಂ.ಪ್ರಕಾಶಪ್ಪ, ಹುಲಿಗೇಪ್ಪ ಕಬಿಲ್ಕರ್, ಜಯಪ್ಪ, ಪ.ಪಂ ಸದಸ್ಯರಾದ ಮಾರ್ಕಪ್ಪ, ಅಜೀತ್ ಹೊನ್ನಟಗಿ, ಮಲ್ಲಪ್ಪ, ಎಲ್.ಕೆ.ಮರಿಯಣ್ಣ, ಗ್ಯಾನಪ್ಪ,ದಾನಪ್ಪ,ರಾಮಯ್ಯ,ಎಂ.ಮನೋಹರ, ಮಲ್ಲಪ್ಪ, ಮೇಶ್ಯಾಕ್, ಶಾಂತಪ್ಪ, ಅಮರೇಶ ಪವಾರ್,ನಾಗರಾಜ ಬಾಗಲವಾಡ, ಗಂಗಾಧರ ಬಾಗಲವಾಡ, ಬಾಲಪ್ಪ ಹಳ್ಳಿಹೊಸೂರು,ಜಗದೀಶ ಬಾಗಲವಾಡ, ಮೌನೇಶ, ಕೋರಿ, ಶೇಖರಪ್ಪ ಮುರ್ಕಿಗುಡ್ಡ, ಶಾಂತಪ್ಪ ಮರಾಟ, ಚನ್ನಪ್ಪ ಬೂದಿನಾಳ, ಡಿ.ಯಮನೂರು, ತಿಮ್ಮಣ್ಣ ಮರಾಟ, ಕುಮಾರ ಭಜಂತ್ರಿ, ದುರಗಪ್ಪ ಭೊವಿ,ಏಸುಮಿತ್ರ, ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ದಲಿತ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.