ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಬೇಡ ವೀರೇಶ್ ಚಲವಾದಿ ಆಗ್ರಹ

ಜೇವರ್ಗಿ :ನ.20:ನಕಲಿ ಬೇಡ ಜಂಗಮರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳಲು ಸಂಚು ಹಾಕಿದ್ದಾರೆ ಕೂಡಲೇ ಅವರಿಗೆ ಪರಿಶಿಷ್ಟ ಜಾತಿ ದೌರ್ಜನ್ಯ ಕೇಸು ಹಾಕಿ ಅವರನ್ನು ಜೈಲಿಗೆ ಕಳಿಸಬೇಕೆಂದು ಮತ್ತು ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಕೊಡಬಾರದು ಅವರು ಮೂಲತ ವೀರಶೈವ ಲಿಂಗಾಯತ ಜಂಗಮರು ಅವರು ಬೇಡ ಜಂಗಮರಲ್ಲ ಎಂದು ವೀರೇಶ್ ಚಲವಾದಿ ಹೇಳಿದರು.
ನಂತರ ಮಾತನಾಡಿದವರು ಆಂಧ್ರದ ಮೂಲದಿಂದ ಬಂದವರು ಅವರು ಹಂದಿ ಮಾಂಸ ತಿನ್ನುತ್ತಾರೆ ಚಾಪೆಯಲ್ಲಿ ನೆಯಿತ್ತಾರೆ ಆದರೆ ಇವರು ಸಸ್ಯಾರಿಯಾಗಿದ್ದು ವೀರಶೈವ ಲಿಂಗಾಯತ ಜಂಗಮರಿದ್ದಾರೆ ಸುಮ್ಮನೆ ಬೇಡ ಜಂಗಮ ಎಂದು ಹೆಸರು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಹೇಳಿದರು ಶಹಾಪುರ ತಾಲೂಕಿನಲ್ಲಿ ಹಮ್ಮಿಕೊಂಡ ನಕಲಿ ಬೇಡ ಜಂಗಮರಿಗೆ ಎಸ್ಸಿ ಸರ್ಟಿಫಿಕೇಟ್ ಬೇಡ ಎಂಬ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು. ನಂತರ ಮಾತನಾಡಿದ ಕರ್ನಾಟಕ ಪ್ರದೇಶ ಚಲವಾದಿ ಸಂಘದ ತಾಲೂಕ ಅಧ್ಯಕ್ಷ ದೇವಿಂದ್ರ ಗೌಡರ್ ಮಾತನಾಡುತ್ತಾ ತಾಲೂಕಿನಲ್ಲಿ ಈಗಾಗಲೇ 450 ಅರ್ಜಿಗಳು ಬಂದಿವೆ ನಕಲಿ ಬೇಡ ಜಂಗಮರು ಅರ್ಜಿಗಳನ್ನು ತಿರಸ್ಕøತ ಆಗಿವೆ ಮುಂದೆ ಯಾವುದೇ ಕಾರಣಕ್ಕೂ ಅವರನ್ನು ಬೇಡ ಜಂಗಮ ಎಸ್‍ಸಿ ಸರ್ಟಿಫಿಕೇಟ್ ಕೊಡಬೇಡಿ ಎಂದು ಆಗ್ರಿಸಿದ್ದಾರೆ ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಹಾಗೂ ದಲಿತ ಸಂಘಟನೆ ಕಾರ್ಯಕರ್ತರು ಭಾಗವಹಿಸಿದರು.