ಬೇಡುವುದು ಬಿಟ್ಟು ಅಧಿಕಾರ ಹಕ್ಕಿಗೆ ಧ್ವನಿ ಎತ್ತಿ – ಎ.ಪಾಪಾರೆಡ್ಡಿ

ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ವಾರ್ಷಿಕ ಮಹಾಸಭೆ
ರಾಯಚೂರು.ನ.೨೦- ರಾಜಕೀಯವಾಗಿ ಎಲ್ಲಿಯವರಿಗೆ ನಾವು ಬೆಳೆಯುವುದಿಲ್ಲವೋ, ಅಲ್ಲಿಯವರಿಗೆ ನಮ್ಮ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಎ. ಪಾಪಾರೆಡ್ಡಿ ಅವರು ಹೇಳಿದರು.
ಅವರಿಂದು ಮುನ್ನೂರುಕಾಪು ಸಮಾಜದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ಸಭೆ ಉದ್ಘಾಟಿಸಿ ಮಾತನಾಡುತ್ತಾ,
ಚುನಾವಣೆಗಳಲ್ಲಿ ಹಿಂದುಳಿದವರಿಗೆ ಅವಕಾಶ ನೀಡುವುದಿಲ್ಲ. ಚುನಾವಣೆ ದುಬಾರಿ ವೆಚ್ಚ ಎಂದು ಹೇಳಿ ಹಿಂದುಳಿದವರು ಚುನಾವಣೆಯಿಂದ ದೂರ ಉಳಿಯುವಂತೆ ಮಾಡಲಾಗುತ್ತಿದೆ. ಹಿಂದುಳಿದವರು ಎಲ್ಲೆ ಚುನಾವಣೆಗೆ ಸ್ಪರ್ಧಿಸಿದರೆ ಅವರ ವಿರುದ್ಧ ಮಾಡಲಾಗುತ್ತದೆ. ಅಪಾರ ಸಂಖ್ಯೆಯಲ್ಲಿ ಇರುವ ಹಿಂದುಳಿದವರು ಚುನಾವಣೆಯಲ್ಲಿ ನಮ್ಮ ಶಕ್ತಿ ಪ್ರದರ್ಶಿಸಬೇಕು.
ನಾನು ಶಾಸಕನಾಗಿದ್ದಾಗ ವಿಧಾನ ಸಭೆಯಲ್ಲಿ ೬೯ ಜನ ಲಿಂಗಾಯತರು, ೪೦ ಕ್ಕೂ ಅಧಿಕ ಒಕ್ಕಲಿಗರು ಇದ್ದರು. ಲಿಂಗಾಯತ ನಿಗಮಕ್ಕೆ ೫೦೦ ಕೋಟಿ ಕೊಡುತ್ತಾರೆ.
ಹಿಂದುಳಿದ ವರ್ಗದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ಯಾವುದೇ ಹಗರಣ ನಡೆಯಲಿಲ್ಲ. ಆದರೂ, ಅವರ ವಿರುದ್ಧ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಬೇಡುವುದು ಬಿಟ್ಟು, ಅಧಿಕಾರ ಪಡೆಯುವ ಹಕ್ಕು ಪ್ರತಿಪಾದಿಸಬೇಕು. ಜನರ ಮಧ್ಯ ವ್ಯಾಪಕ ಪ್ರಚಾರ ಮಾಡಬೇಕು. ಬೀದಿಗೆ ಬಂದ ಹಕ್ಕು ಪಡೆಯುವ ಧ್ವನಿಮೊಳಗಿಸಬೇಕು ಎಂದರು.
ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟ ಅಧ್ಯಕ್ಷರಾದ ಕೆ.ಶಾಂತಪ್ಪ ಅವರು ಮಾತನಾಡುತ್ತಾ, ಮೀಸಲಾತಿ ವಿಷಯದಲ್ಲಿ ಹಿಂದುಳಿದವರ ಪರ ಧ್ವನಿ ಎತ್ತುವ ಹಾಗೂ ಸಾಮಾಜಿಕ, ಆರ್ಥಿಕ ಜಾಗೃತಿ ಮೂಡಿಸುವ ರೀತಿಯಲ್ಲಿ ಪ್ರತಿಯೊಬ್ಬರು ಕಾರ್ಯಕ್ರಮಗಳನ್ನು ನಿರಂತರ ನಡೆಸಯಬೇಕು. ನಗರದಲ್ಲಿ ಹಿಂದುಳಿದ ಧೀಮಂತರ ನಾಯಕ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರ ಪುತ್ಥಳಿ ನಿರ್ಮಾಣ ಮತ್ತು ಭವನ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ ಶೇ.೫೬ ರಷ್ಟು ಜನರಲ್ಲಿ ಹಿಂದುಳಿದ ಜನರಿದ್ದಾರೆ.
ಆದರೆ, ಮೀಸಲಾತಿ ಪ್ರಮಾಣ ರಾಜ್ಯದಲ್ಲಿ ಶೇ.೩೨ ರಷ್ಟಿದೆ. ಕೇಂದ್ರದಲ್ಲಿ ಶೇ. ೨೭ ರಷ್ಟಿದೆ. ಆದರೆ, ಶೇ.೧೭ ರಷ್ಟು ಮುಂದುರೆದ ಜನರಿಗೆ ಶೇ.೫೦ ರಷ್ಟು ಮೀಸಲಾತಿ ಇದೆ. ಕೃಷ್ಣರಾಜ ಒಡೆಯರ ಆಡಳಿತದಲ್ಲಿ ಮೀಸಲಾತಿ ಇತ್ತು. ಮಿಲ್ಲಾರ್ ಆಯೋಗದಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಪ್ರಸ್ತಾಪ ಇತ್ತು. ಇಂದು ಆರ್ಥಿಕ ದುರ್ಬಲ ವರ್ಗಕ್ಕೆ ಶೇ.೧೦ ರಷ್ಟು ಮೀಸಲಾತಿ ನೀಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲು ಹೆಚ್ಚಳ ಮಾಡಲಾಗಿದೆ. ಶೇ.೫೦ ರಷ್ಟು ಸಾಮಾನ್ಯ ವರ್ಗಕ್ಕೆ ಇದ್ದು, ಮೀಸಲಾತಿಯಲ್ಲಿ ನಾವು ಸ್ಪರ್ಧಿಸುವ ಅವಕಾಸ ಇತ್ತು. ಈಗ ಈ ಅವಕಾಶ ಕಡಿಮೆಯಾಗಿದೆ. ಹಿಂದುಳಿದವರ ಮೀಸಲಾತಿ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು.
ರಾಜಕೀಯವಾಗಿ ನಮಗೆ ಯಾವುದೇ ಅವಕಾಶ ಇಲ್ಲದಾಗಿದೆ. ಕಲ್ಯಾಣ ಕರ್ನಾಟಕದ ೪೧ ಕ್ಷೇತ್ರಗಳಲ್ಲಿ ಕೇವಲ ಐದು ಜನರು ಹಿಂದುಳಿದವರು ಇದ್ದಾರೆ. ನಮ್ಮ ಒಗ್ಗಟ್ಟಿನ ಕೊರತೆಯಿಂದ ನಾವು ಅಧಿಕಾರದಿಂದ ವಂಚಿತಗೊಳ್ಳುತ್ತಿದ್ದೇವೆ. ನಾವು ದುರ್ಬಲವಾಗಿರುವುದರ ಲಾಭ ಬೇರೆಯವರು ಪಡೆಯಲು ಅವಕಾಶ ನೀಡಿದಂತಾಗಿದೆ. ಹಿಂದುಳಿದ ಅವರ ಬಗ್ಗೆ ಯಾವ ಪಕ್ಷಗಳು ಗೌರವ ನೀಡುತ್ತಿಲ್ಲ. ಹಿಂದುಳಿದ ನಿಗಮಗಳಿಗೆ ಒಟ್ಟು ೧೦೨ ಕೋಟಿ ನೀಡುವ ಸರಕಾರ, ಕೇವಲ ಎರಡು ಸಮುದಾಯಗಳಿಗೆ ಒಂದು ಸಾವಿರ ಕೋಟಿ ರೂ. ನೀಡಲಾಗಿದೆ. ಇದು ನಮ್ಮ ಪರಿಸ್ಥಿತಿಯಾಗಿದೆ. ನಾಯಕತ್ವ ಕೊರತೆಯಿಂದ ಈ ಸ್ಥಿತಿಗೆ ಕಾರಣವಾಗಿದೆ. ಈ ಸಭೆಯಲ್ಲಿ ಶ್ರೀಕಾಂತ, ಖಾಜನಗೌಡ, ಜಯವಂತರಾವ್ ಪತಂಗೆ, ವೆಂಕಟಸಿಂಗ್, ಕೆ.ಸತ್ಯನಾರಾಯಣ, ಮಾತನಾಡಿದರು.
ವೇದಿಕೆಯಲ್ಲಿ ಹನುಮಂತಪ್ಪ, ಕೆ.ಪಂಪಣ್ಣ, ಬಿ.ಬಸವರಾಜ, ಶಿವಮೂರ್ತಿ, ಜಿ.ಸುರೇಶ, ಶರಣಪ್ಪ, ನಾಗೇಂದ್ರಪ್ಪ, ಈರಮ್ಮ, ಶರಣಪ್ಪ ಕಡಗೋಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.