ಬೇಡಿಕೆ ಈಡೇರಿಸುವಂತೆ ಎಲ್‍ಐಸಿ ಪ್ರತಿನಿಧಿಗಳ ಪ್ರತಿಭಟನೆ

ಚಾಮರಾಜನಗರ:ಮಾ:24: ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಚಾ.ನಗರ ಶಾಖೆಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ‘ವಿಶ್ರಾಂತಿ ದಿನ’ವನ್ನಾಗಿ ಆಚರಣೆ ಮಾಡಲಾಯಿತು.
ನಗರದ ಭಾರತೀಯ ಜೀವ ವಿಮಾ ಶಾಖೆಯ ಮುಂಭಾಗ ಸಮಾವೇಶಗೊಂಡ ಜೀವ ವಿಮಾ ಪ್ರತಿನಿಧಿಗಳು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಧರಣಿ ನಡೆಸಿ, ಕೇಂದ್ರ ಸರ್ಕಾರಕ್ಕೆ ತಮ್ಮ ಹಕ್ಕೋತ್ತಾಯಗಳನ್ನು ಮಂಡಿಸಿದರು.
ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಬಿ. ಶಿವಕುಮಾರಸ್ವಾಮಿ ಮಾತನಾಡಿ, ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದ ಕರೆಯ ಮೇರೆಗೆ ದೇಶಾದ್ಯಂತ ಎಲ್‍ಐಸಿ ಪ್ರತಿನಿಧಿಗಳು ಬಹುದಿನಗಳ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ವಿಶ್ರಾಂತಿ ದಿನವನ್ನು ಆಚರಣೆ ಮಾಡ ಲಾಗುತ್ತಿದೆ.
ಪ್ರಮುಖ 8 ಬೇಡಿಕೆಗಳಾದ ಪಾಲಿಸಿದಾರರಿಗೆ ಬೋನಸ್ ಹೆಚ್ಚಳ ಮಾಡಬೇಕು. ಎಲ್ಲಾ ಹಣಕಾಸು ವ್ಯವಹಾರಗಳ ಮೇಲಿನ ಬಡ್ಡಿ ದರ ಇಳಿಕೆಯಾಗಬೇಕು. ಪಾಲಿಸಿಗಳ ಮೇಲಿನ ಜಿಎಸ್‍ಟಿ ರದ್ದಗೊಳಿಸಬೇಕು. ಪ್ರತಿನಿಧಿಗಳ ಗ್ರಾಚುಯಿಟಿ ಹಣವನ್ನು ಹೆಚ್ಚಿಸುವುದು, ಗುಂಪು ವಿಮೆ ಹೆಚ್ಚಳ ಮಾಡುವುದು. ಕೋವಿಡ್‍ನಿಂದಾಗಿ ಕ್ಲಬ್ ಸದಸ್ಯರಿಗೆ ರಿಲ್ಯಾಕ್ಸೆಷನ್ ಮುಂದುವರಿಸಬೇಕು. ಐಪಿಓ ಹಿಂಪಡೆಯುವಿಕೆ ಯಾಗಬೇಕು. ಜೀವ ವಿಮಾ ಪ್ರತಿನಿಧಿಗಳ ಕಮೀಷನ್ ಹೆಚ್ಚಳ ಮಾಡ ಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ವಿಭಾಗೀಯ ಉಪಾಧ್ಯಕ್ಷ ಎಂ. ನಾಗೇ ಂದ್ರಸ್ವಾಮಿ, ಖಜಾಂಚಿ ಎಂ. ಸುಂದರ್, ಸಂಘಟನಾ ಅಧ್ಯಕ್ಷ ಎಸ್. ನಾಗನಾಯಕ್,ಕಾರ್ಯದರ್ಶಿ ಕೆ.ಎಸ್. ನಾಗರಾಜು, ಶಾಖಾ ಉಪಾಧ್ಯಕ್ಷರಾದ ಭೋಗಾಪುರ ನಾಗೇಂದ್ರ, ಪಿ. ಲೋಕೇಶ್, ಮಹಿ ಳಾ ಪ್ರತಿನಿಧಿಗಳಾದ ರತ್ನಮ್ಮ, ಬಿ. ಶಿವಮ್ಮ, ಕೋ ಮಲ, ಫಿಲೋಮಿನಾ, ಸಂಘದ ಪದಾಧಿಕಾರಿ ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.