
ಹುಬ್ಬಳ್ಳಿ,ಮಾ.13: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಇಲ್ಲದಿದ್ದರೆ ಮಾರ್ಚ್ 16 ರಂದು ಸಾಮೂಹಿಕವಾಗಿ ಎಲ್ಲ ಅಧಿಕಾರಿಗಳು ಮತ್ತು ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಿದ್ದೇವೆ ಎಂದು ಇಲ್ಲಿನ ತಬೀಬ್ ಲ್ಯಾಂಡ್ ಬಳಿ ಇರುವ ಕವಿಪ್ರನಿ ಆವರಣದಲ್ಲಿ ನೌಕರರ ಸಂಘ ಎಚ್ಚರಿಕೆ ನೀಡಿತು.
ಕವಿಪ್ರನಿ ನೌಕರರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಇಲ್ಲದಿದ್ದರೆ ನಾವು ಸಾಮೂಹಿಕವಾಗಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದೇವೆ ಎಂದು ಕವಿಪ್ರನಿ ಕೇಂದ್ರ ಸಮಿತಿ ಸದಸ್ಯರಾದ ಬಿ.ಎಲ್.ಗುಂಜೀಕರ್ ಹೇಳಿದರು.
ಈಗಾಗಲೇ ಆಡಳಿತ ಮಂಡಳಿ 14 ದಿನಗಳ ವರೆಗೆ ಮುಷ್ಕರ ನೋಟೀಸ್ ಜಾರಿ ಮಾಡಿದ್ದು, ಈಗಾಗಲೇ 10 ದಿನಗಳು ಕಳೆದರೂ ಕೂಡಾ ಮಂಡಳಿಯಿಂದ ನೌಕರರ ಬೇಡಿಕೆಗಳಿಗೆ ಪೂರಕವಾದ ಸ್ಪಂದನೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವೇತನ ಪರಿಷ್ಕರಣೆ, ಓಪಿಎಸ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಇಲ್ಲದಿದ್ದರೆ ಮುಂದಿನ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.
ಪ್ರಕಾಶ ಪಾಪಸ್, ಮೋಹನರಾಜ್ ಅಮ್ಮಿನಬಾವಿ, ಕಿರಣಕುಮಾರ್, ಬೆಂಜಿಮನ್ ಮಸ್ಕರನ್ಸ್, ನಿವೃತ್ತ ಸಂಘದ ಪಿ.ಜೆ.ಅಮ್ಮಿನಬಾವಿ, ವಾಯ್.ಎಮ್. ರಿಟ್ಟೂರ, ಪಿಡ್ಡನಗೌಡ್ರ, , ಎಂ.ಎ.ಬೇಪಾರಿ, ಸ್ಥಳೀಯ ಕಮಿಟಿಯ ಅಧ್ಯಕ್ಷರಾದ ಉಸ್ಮಾನ್ ಮಿರಜಕರ್, ಕ್ರಿಷ್ಟೋಪರ್, ಸದಸ್ಯರು ಹಾಗೂ ಪ್ರಾಥಮಿಕ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.