ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ

(ಸಂಜೆವಾಣಿ ವಾರ್ತೆ)
ನವಲಗುಂದ,ಜ26 : ರೈತರ ತಾಳ್ಮೆಯನ್ನ ಪರೀಕ್ಷೆ ಮಾಡಬೇಡಿ ಕುಡಿಯುವ ನೀರಿಗಾಗಿ ರೈತರ ಹೋರಾಟವನ್ನು ಹಗರುವಾಗಿ ಪರಿಗಣಿಸಿದರೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಮಹದಾಯಿ ಕಳಸಾ ಬಂಡೂರಿ ಅಧ್ಯಕ್ಷ ಯಲ್ಲಪ್ಪ ದಾಡಿಬಾವಿ ಆಕ್ರೋಶ ವ್ಯಕ್ತಪಡಿಸಿದರು.

ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ವತಿಯಿಂದ ತಹಶೀಲ್ದಾರ್ ಕಚೇರಿಯ ಐ ಆರ್ ಭಜಂತ್ರಿಯವರ ಮುಖಾಂತರ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಗೆ ವಿವಿಧ ಬೇಡಿಕೆಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಶೀಘ್ರವಾಗಿ ಕಳಸಾ ಬಂಡೂರಿ ಕಾಮಗಾರಿಗೆ ಟೆಂಡರ್ ಕರೆದು ಕೆಲಸ ಪ್ರಾರಂಭಿಸಿ ಮತ್ತು ಬರಗಾಲ ಅಂತಾ ಘೋಷಣೆ ಯಾಗಿ 6ತಿಂಗಳು ಗತಿಸಿದರು ರೈತರಿಗೆ ಪರಿಹಾರ ಬಂದಿರುವದಿಲ್ಲ. ಶೀಘ್ರ ಪರಿಹಾರ ಹಾಕಬೇಕು ಹಾಗೇ ಸಾಲಮನ್ನಾ, ರೈತರು ಬ್ಯಾಂಕಿನಲ್ಲಿ ಸಾಲ ಪಡೆದು ಕಟಾಬಾಕಿಯಾದರೆ ಮರಳಿ ಸಾಲ ಕೊಡುವದಿಲ್ಲ ಇಂತಹ ಸಿಬಿಐಎಲ್ ತೆಗೆದು ಹಾಕಿ ಮರಳಿ ಸಾಲ ಕೊಡವಂತಾಗಬೇಕು, ಪಟ್ಟಣದಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪನೆ ಮಾಡಬೇಕು. ನಮ್ಮಲ್ಲಾ ಬೇಡಿಕೆಗಳನ್ನು ಈಡರಿಸದೆ ಹೋದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತರ ಸಮ್ಮುಖದಲ್ಲಿ ಮನವಿ ಸಲ್ಲಿಸಿದರು.

ಎಸ್. ಬಿ.ಪಾಟೀಲ, ಮಲ್ಲೇಶ್ ಉಪ್ಪಾರ , ಬಸನಗೌಡ ಹುಣಸಿಕಟ್ಟಿ, ಶಿವಪ್ಪ ಸಂಗಳದ, ಕರಿಯೆಪ್ಪ ತಳವಾರ, ಸಿದ್ದಲಿಂಗಪ್ಪ ಹಳ್ಳದ, ರವಿ ತೋಟದ, ವಾಯ್. ಬಿ.ಇನಾಮತಿ, ಚಾ ಹುಸೇನ್, ಬಾಂಬೆ ಮೇಸ್ತ್ರಿ, ಬಸಪ್ಪ ಮುಪ್ಪಯ್ಯನವರ, ಗೋವಿಂದರೆಡ್ಡಿ ಮೊರಬದ, ಸಂಗಪ್ಪ ನೀಡವಣಿ ಅನೇಕ ರೈತರು ಹಾಜರಿದ್ದರು.