ಬೇಡಿಕೆ ಈಡೇರಿಕೆಗೆ ಸಂಘಟನೆಗಳಿಂದ ಸಿಎಂಗೆ ಮನವಿ

(ಸಂಜೆವಾಣಿ ವಾರ್ತೆ)
ಸಿಂಧನೂರು.ಡಿ.೩೧- ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ತಾಲೂಕು ವಕೀಲರ ಸಂಘ, ಕನ್ನಡ ಪರ ಸಂಘಟನೆಗಳು, ಅತಿಥಿ ಉಪನ್ಯಾಸಕರು, ಭೂಮಿ ಹಾಗೂ ವಸತಿ ರಹಿತರು, ರೈತ ಸಂಘಟನೆ ಗಳು ಮತ್ತು ಕಾರುಣ್ಯಾಶ್ರಮ ಸೇರಿದಂತೆ ಹತ್ತಾರು ಸಂಘಟನೆಗಳ ಮುಖಂಡರು ತಮ್ಮ ಹಕ್ಕೊತ್ತಾಯ ಗಳನ್ನು ಈಡೆರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಶನಿವಾರ ವಿವಿಧ ಕಾಮಗಾರಿ ಗಳ ಲೋಕಾರ್ಪಣೆ ನಿಮಿತ್ತ ಸಿಂಧನೂರು ನಗರಕ್ಕೆ ಆಗಮಿಸಿದ ಸಿ.ಎಮ್ ಅವರಿಗೆ ಮನವಿ ಸಲ್ಲಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ: ರಾಯಚೂರು ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಹಾಗೂ ನವೀಕರಣ ಅನುಮತಿ ಗಾಗಿ ಸರ್ಕಾರ ನಿಗದಿಪಡಿಸಿದ ಶುಲ್ಕ ದಲ್ಲಿ ಶೇ.೫೦ % ರಿಯಾಯಿತಿ, ಪದವಿ, ಪದವಿ ಪೂರ್ವ ವಿದ್ಯಾರ್ಥಿಗಳಿಂದ ವಿಶ್ವವಿದ್ಯಾಲಯ, ಪಿ.ಯು ಬೋರ್ಡ್ ವಸೂಲಿ ಮಾಡುತ್ತಿರುವ ಶುಲ್ಕ ಅರ್ಧದಷ್ಟು ಕಡಿತಗೊಳಿಸಬೇಕು, ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಆದೇಶ ನೀಡಬೇಕು, ೧೯೯೫ ಕ್ಕಿಂತ ಮುಂಚೆ ಪ್ರಾರಂಭವಾದ ಶಾಲೆಗಳಿಗೆ ವೇತನ ಅನುದಾನ ಕಲ್ಪಿಸಿದ್ದು, ೧೯೯೫ ರಿಂದ ೨೦೧೫ ರವರೆಗೆ ಸಂಸ್ಥೆ ಗಳಿಗೆ ವೇತನ ಅನುದಾನಕ್ಕೆ ಒಳಪಡಿಸಬೇಕು, ಕೆ.ಕೆ.ಆರ್.ಡಿ.ಬಿ ಹಾಗೂ ೩೭೧ ಜೆ ಅಡಿಯಲ್ಲಿ ಕುಡಿಯುವ ನೀರು, ಕಟ್ಟಡ ಎಂದು ಒತ್ತಾಯಿಸಿದರು.
ರೈತ ಸಂಘ: ಜಿಲ್ಲೆಯಾದ್ಯಂತ ಏತ ನೀರಾವರಿ ಯೋಜನೆ ಸಮಗ್ರ ಬಳಕೆಗೆ ಅನುಕೂಲ ವಾಗುವಂತೆ ಕೈಗೆತ್ತಿಕೊಳ್ಳಬೇಕು, ಬರಗಾಲ ಸರಿದೂಗಿಸಲು ಕೃಷ್ಣ ಹಾಗೂ ತುಂಗಭದ್ರಾ ನದಿ ಜೋಡಣೆ ಮಾಡಬೇಕು, ನವಲಿ ಜಲಾಶಯ ಕಾಮಗಾರಿ ಕೈಗೆತ್ತಿಕೊಂಡು ಜನ ಸಾಮಾನ್ಯರು ಗುಳೆ ಹೋಗುವುದನ್ನು ತಪ್ಪಿಸಬೇಕು, ಲಕ್ಷಾಂತರ ಎಕರೆ ಭೂಮಿಗೆ ನೀರು ಕಳ್ಳತನ ಮಾಡಿ ಅಕ್ರಮ ನೀರಾವರಿ ಮಾಡುತ್ತಿರುವ ದನ್ನು ತಪ್ಪಿಸಲು ದಕ್ಷ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕೆಂದು ಶರಣಪ್ಪ ಮರಳಿ, ರಾಮಯ್ಯ ಹಲವರಿದ್ದರು.
ತಾಲುಕ ವಕೀಲರ ಸಂಘ: ಸಿಂಧನೂರಿನಲ್ಲಿ ಐದು ನ್ಯಾಯಾಲಯಗಳು ಕಾರ್ಯ ನಿರ್ವಹಣೆಗೆ ಸ್ಥಳದ ಅಭಾವ ಇರುವುದರಿಂದ ಹತ್ತು ಎಕರೆ ಸ್ಥಳವಕಾಶ ಬೇಕಾಗಿದ್ದು ಪ್ರವಾಸಿ ಮಂದಿರದ ಜಾಗ ಕೊಡಿಸಬೇಕು, ಜಿಲ್ಲಾ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲು ಬಜೆಟ್‌ನಲ್ಲಿ ಅನುಮೋದನೆ ಪಡೆಯುವುದು, ವಕೀಲರ ಕಲ್ಯಾಣ ನಿಧಿ ಎಂಟು ರಿಂದ ಹತ್ತು ಲಕ್ಷ ರೂ ವರೆಗೆ ಹೆಚ್ಚಿಸಬೇಕು ಎಂದು ವಕೀಲರ ಸಂಘದ ತಾಲೂಕು ಅಧ್ಯಕ್ಷ ಎನ್.ರಾಮನಗೌಡ, ಖಜಾಂಚಿ ಶರಣ ಬಸವ ಉಮಲೂಟಿ, ಅಮರೇಗೌಡ ಹಲವರಿದ್ದರು.