ಬೇಡಿಕೆ ಈಡೇರಿಕೆಗೆ ಬಿತ್ತಿ ಪತ್ರ ಇಡಿದು ಪ್ರತಿಭಟನೆ

ರಾಯಚೂರು, ಮೇ.೧- ಕೋವಿಡ್ ಸೊಂಕಿತರಿಗೆ ರಾಜ್ಯ ಸರ್ಕಾರ ಉಚಿತ ಚಿಕಿತ್ಸೆ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿ. ಐ.ಟಿ.ಯು.ಹಾಗೂ ಅಂಗನವಾಡಿ ನೌಕರರ ಸಂಘ ಇಂದು ನಗರದ ಹರಿಜನವಾಡದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಬಿತ್ತಿ ಪತ್ರ ಇಡಿದು ಪ್ರತಿಭಟನೆ ಮಾಡಿದರು.
ಕೋವಿಡ್ ಸೊಂಕಿತರಿಗೆ ರಾಜ್ಯ ಸರ್ಕಾರ ಉಚಿತ ಆಹಾರ ಮತ್ತು ಔಷಧ ಒದಗಿಸಬೇಕು.ಕೋವಿಡ್ ಸೊಂಕಿತರಿಗೆ ರಾಜ್ಯ ಸರ್ಕಾರ ತ್ವರಿತ ಆಸ್ಪತ್ರೆ ಮತ್ತು ಆಂಬುಲೆನ್ಸ್ ಸೇವೆ ಒದಗಿಸಬೇಕು. ಕೋವಿಡ್ ಸೊಂಕಿತರಿಗೆ ರಾಜ್ಯ ಸರ್ಕಾರ ಅಗತ್ಯ ತುರ್ತು ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶದ ಆರೋಗ್ಯ ಸೇವೆ ಬಲಪಡಿಸಬೇಕು.ತಲಾ ೧೦ ಕೆಜಿ. ಆಹಾರ ಧಾನ್ಯ ಒದಗಿಸಬೇಕು.ಲಾಕ್ ಡೌನ್ ಬಾದಿತ ಕಾರ್ಮಿಕರಿಗೆ ಪೂರ್ಣ ವೇತನ ಜೀವಗಳನ್ನು ಉಳಿಸಬೇಕು ಹಾಗೂ. ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೆಚ್.ಪದ್ಮಾ,ಗೋಕಾರಮ್ಮ,ಕಸ್ತೂರಿ,ಮಂಗಳ ಪವಾರ್,ಚಿಟ್ಟೆದೇವಿ,ತಿಮಲಮ್ಮ,ವಿಧ್ಯಾ,ಚಂದ್ರಕಲಾ, ಅಂಜಿನಮ್ಮ,ನರಸಮ್ಮ, ನಾಗಮ್ಮ,ಕೆ.ಜಿ.ವಿರೇಶ, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.