ಬೇಡಿಕೆ ಈಡೇರಿಕೆಗೆ ಆಗ್ರಹ

ಕಾಳಗಿ. ಮಾ.24 : ತಾಲೂಕಿನ ರಟಕಲ್ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಮಾಡಬೇಕು, ಗ್ರಾಮಕ್ಕೆ ಆಂಬುಲೆನ್ಸ್ ಸೇವೆಯನ್ನು ಒದಗಿಸಬೇಕು, ಕಾಲೇಜು ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದೆ.
ಇದರ ಸಲುವಾಗಿ ಗ್ರಾಮಸ್ಥರು ಸೇರಿ ರಟಕಲ್ ಬಂದ್ ಎಂಬ ಕರೆ ಕೊಟ್ಟು 4 ಬಾರಿ ಹೋರಾಟ ಸಹ ಮಾಡಿದ್ದೇವೆ. ಶಾಸಕರಿಗೆ ಮನವಿ ಪತ್ರಗಳನ್ನು ಸಹ ಕೊಟ್ಟಿದ್ದೇವೆ.
ಗ್ರಾಮದ ಅಭಿವೃದ್ಧಿಗಾಗಿ ನಮ್ಮ ಹಕ್ಕುಗಳನ್ನು ಕೇಳಿಕೊಳ್ಳುತ್ತಿದ್ದೇವೆ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಇಲ್ಲವಾದರೆ ಮುಂದಿನ ದಿನದಲ್ಲಿ ರಕ್ತದಿಂದ ಮನವಿ ಬರೆದು ಬೃಹತ ಹೋರಾಟ ಮಾಡಬೇಕಾಗುತ್ತದೆ ಮುಂಬರುವ ಚುನಾವಣೆಗಳನ್ನು ಬಹಿಸ್ಕರಿಸಿ ಹೋರಾಟ ಮುಂದುವರಿಸಬೇಕಾಗುತ್ತದೆ ಎಂದು ತಾಲೂಕ ಹಿಂದೂ ಜಾಗೃತಿ ಸೇನೆ ಅಧ್ಯಕ್ಷರಾದ ಶಂಕರ ಚೋಕಾ ಹೇಳಿದರು.