ಬೇಡಿಕೆ ಈಡೇರಿಕೆಗೆ ಅನುದಾನ: ಭರವಸೆ

ಬಾಗಲಕೋಟೆ,ಜ.11 : ರಾಜ್ಯ ಬಿಜೆಪಿ ಪಕ್ಷದ ಓಬಿಸಿ ಮೋರ್ಚಾದ ರಾಜ್ಯ ಅಧ್ಯಕ್ಷ ಎನ್.ಎಲ್. ನರೇಂದ್ರಬಾಬುರವರು ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತಿ ಸಣ್ಣ ಸಮುದಾಯಗಳ ಬಾಗಲಕೋಟ ಜಿಲ್ಲಾ ಅಧ್ಯಕ್ಷರಾದ ಅಮರೇಶ ಕೊಳ್ಳಿಯವರ ಮನೆಗೆ ಭೇಟಿ ನೀಡಿದರು.
ನಂತರ ಚರ್ಚಿಸಿ ಹಿಂದುಳಿದ ವರ್ಗಗಳ ಮುಖಂಡರ ಸಮಸ್ಯೆಗಳನ್ನು ಆಲಿಸಿ ಹಿಂದುಳಿದ ವರ್ಗಗಳ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದು ಹೆಚ್ಚಿನ ಹಿಂದುಳಿದ ವರ್ಗಗಳ ನಿಗಮಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಲು ಬಾಗಲಕೋಟ ಜಿಲ್ಲಾ ಒಕ್ಕೂಟದಿಂದ ಮನವಿ ಮಾಡಿಕೊಳ್ಳಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತಿ ಸಣ್ಣ ಸಮುದಾಯಗಳ ಬಾಗಲಕೋಟ ಜಿಲ್ಲಾ ಘಟಕದಿಂದ ನೆ.ಲ. ನರೇಂದ್ರಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಸತೀಶ ಶೇಜವಾಡಕರ ಅವರನ್ನು ಸನ್ಮಾನಿಸಿ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಬಾಗೇವಾಡಿಯವರ ನೇತೃತ್ವದಲ್ಲಿ ಅಮರೇಶ ಕೊಳ್ಳಿಯವರಿಗೆ ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲು ಮನವಿ ಮಾಡಿಕೊಳ್ಳಲಾಯಿತು. ನಗರಸಭೆ ಸದಸ್ಯರಾದ ಪ್ರಕಾಶ ಹಂಡಿಯವರ ಸ್ವಗೃಹದಲ್ಲಿ ಭೋಜನಕೂಟ ಏರ್ಪಡಿಸಲಾಗಿತ್ತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಹಡಪದ, ಉಪಾಧ್ಯಕ್ಷರಾದ ಬನಪ್ಪ ಮಡಿವಾಳರ ಕಾರ್ಯದರ್ಶಿ ರವಿ ಬಡಿಗೇರ, ಗಂಗೂಬಾಯಿ ರಜಪೂತ, ನಗರಸಭೆಯ ನೂತನ ಸಭಾಪತಿಗಳಾದ ರವಿ ದಾಮಜಿ, ಆಶ್ರಯ ಕಮೀಟಿ ಸದಸ್ಯರಾದ ಅನಿತಾ ಸರೋದೆ, ಈರಬಸು ಕೊಳ್ಳಿ, ನಗರ ಕಾರ್ಯದರ್ಶಿ ವಿಜಯ ದಫಡೆ ಉಪಸ್ಥಿತರಿದ್ದರು.