ಬೇಡಿಕೆ ಈಡೇರಿಕೆಗೆ ಅಂಗನವಾಡಿ ನೌಕರರು ಆಗ್ರಹ

ರಾಯಚೂರು, ಮೇ.೨೭- ಒಂದನೇ ಆಲೆಯಲ್ಲಿ ಕರೋನಾ ಕೆಲಸದಲ್ಲಿ ನಿಧನರಾದ ೨೫ ಅಂಗನವಾಡಿ ನೌಕರರಿಗೆ ೩೦ ಲಕ್ಷ ರೂ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಎರಡನೇ ಆಲೆಯಲ್ಲಿ ಕರೋನಾ ಕೆಲಸಕ್ಕೆ ವೈಯಕ್ತಿಕ ನೇಮಕ ಪತ್ರವನ್ನು ಖಾತ್ರಿ ಪಡಿಸಬೇಕು.ಆಹಾರ ಧಾನ್ಯಗಳನ್ನು ಹಂಚುವಾಗ ಪ್ರತಿ ಫಲಾನುಭವಿಗಳಿಗೆ ಪ್ಯಾಕೆಟ್ ರೂಪದಲ್ಲಿ ಕೊಡಬೇಕು. ಆಹಾರ ಧಾನ್ಯಗಳ ಹಂಚಿಕೆಗೆ ವಿಶೇಷ ಟಿ.ಎ. ಕೊಡಬೇಕು , ಮಾಸ್ಕ್ ಮತ್ತು ಸ್ಯಾನಿಟೈಸರ್ ಮತ್ತು ಮುಖಗವಸು,ಗೌಸ್ ಕೊಡಬೇಕು. ೫೦ ವರ್ಷ ಮೇಲ್ಪಟ್ಟ ಗರ್ಭಿಣಿ ಬಾಣಂತಿಯರು ಮತ್ತು ಮಾರಣಾಂತಿಕ ಖಾಯಿಲೆಯಿರುವ ಅಂಗನವಾಡಿ ಕಾರ್ಯಕರ್ತೆ – ಶಹಾಯಕಿಯರಿಗೆ ಕಲೋನಾ ಕೆಲಸದಿಂದ ವಿನಾಯ್ತಿ ಕೊಡಬೇಕೆಂದು ಒತ್ತಾಯಿಸಿದರು.
ಅನುಕಂಪದ ಆಧಾರದಲ್ಲಿ ಕೆಲಸದಲ್ಲಿದ್ದು ನಿಧನರಾದ ಅಂಗನವಾಡಿ ನೌಕರರ ಕುಟುಂಬಗಳಿಗೆ ಕೊಡುವ ಕೆಲಸವನ್ನು ಕರೋನಾ ಸಂದರ್ಭದಲ್ಲಿ ನಿಧನರಾದವರ ಕುಟುಂಬದವರಿಗೆ ಕಾರ್ಯಕರ್ತೆ ಸಹಾಯಕಿಯ ಕೆಲಸ ಕೊಡಲು ಕುಟುಂಬದಲ್ಲಿ ಯಾರಿಗಾದರೂ ಒಬ್ಬರಿಗೆ ಕೆಲಸ ನೀಡಬೇಕೆಂದು ಆದೇಶ ತಿದ್ದುಪಡಿ ಮಾಡಬೇಕು.ಕರೋನಾ ಸಂದರ್ಭದ ಅಗತ್ಯವಿರುವ ಕೆಲಸಗಳನ್ನು ಬಿಟ್ಟು ಉಳಿದ ಕೆಲಸಗಳನ್ನು ಮುಂದೂಡಬೇಕು.ಬಾಕಿಯಿರುವ ಗೌರವಧನ ,ಮೊಟ್ಟೆ ಹಣ ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಮೊಟ್ಟೆ ಹಣ ಮುಂಗಡವಾಗಿ ಹಾಕಬೇಕು. ಇಲ್ಲದಿದ್ದರೆ ಆಹಾರ ಧಾನ್ಯಗಳೊಟ್ಟಿಗೆ ಸರಬರಾಜು ಮಾಡಬೇಕು.ಈಗ ರದ್ದು ಪಡಿಸಿರುವ ಬೇಸಿಗೆ ರಜೆಯನ್ನು ಮಳೆಗಾಲದಲ್ಲಿ ಕೊಡಬೇಕು ಅಥವಾ ೧೫ ದಿನಗಳ ಹೆಚ್ಚುವರಿ ವೇತನ ಕೊಡಬೇಕು. ಜಿಲ್ಲೆಯಲ್ಲಿ ಕೆಲಸ ಕರೋನಾ ವಾರಿಯಗಳಾಗಿ ಮತ್ತು ೫೦ ವರ್ಷ ಮೇಲ್ಪಟ್ಟ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತೆ ಸಹಾಯಕಿಯರಿಗೆ ಕೂಡ ಕರೋನಾ ವಾರಿಯರ್‌ಗಳೆಂದೆ ಗ್ರಾಮ ಪಂಚಾಯಿತಿಗಳಿಂದ ಹಾಗೂ ನಗರ ಸಭೆಗಳಿಂದ ಆದೇಶ ಪತ್ರ ನೀಡಬೇಕು. ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು. ಮತ್ತು ರಾಯಚೂರು ತಾಲೂಕಿನಲ್ಲಿ ಸುಮಾರು ೫-೬ ಜನ ಸಹಾಯಕಿ ಹುದ್ದೆಯಿಂದ ಕಾರ್ಯಕರ್ತೆ ಹುದ್ದೆಗೆ ಮುಂಬಡ್ತಿ ಕೋಟ್ ತಲಾರ್ ಅಂಗನವಾಡಿ ಕೇಂದ್ರ ಕಾರ್ಯಕರ್ತೆ ನಿಧನ ಹೊಂದಿದ್ದು ಅವಳ ಮಗಳಿಗೆ ಅನುಕಂಪ ಆಧಾರದ ಮೇಲೆ ಉದ್ಯೋಗ ಆದೇಶ ನೀಡಲು ವಿಳಂಬ ಅನುಸರಿಸುತ್ತಿದ್ದು ಕೂಡಲೆ ಅವರಿಗೆ ಉದ್ಯೋಗ ನೇಮಕಾತಿ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಚ್ ಪದ್ಮಾ, ರಂಗಮ್ಮ ಅನ್ವರ್,ಕೆಜಿ ವೀರೇಶ್, ಗೋ ಕರಮ್ಮ, ಸೇರಿದಂತೆ ಇತರರು ಇದ್ದರು.