ಸಿಂಧನೂರು,ಜೂ.೨೮-
ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಗರದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರ ವನ್ನು ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಿಂದ ಹೊರಟ ಅಂಗನವಾಡಿ ಕಾರ್ಯಕರ್ತೆಯರು ನಗರದ ವಿವಿಧ ವೃತ್ತಗಳಲ್ಲಿ ಮೇರವಣೆಗೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಯನ್ನು ಕೂಗಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಅಗ್ರಹ ಪಡಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ನೀಡಿರುವ ಮೋಬಲ್ ಗಳನ್ನು ವಾಪಾಸು ಪಡೆದು ಹೊಸದಾಗಿ ಮೋಬಲ್‌ಗಳನ್ನು ವಿತರಿಸಬೇಕು, ಗೌರವ ಧನ ಹೆಚ್ಚಳ,ಇಡಿಗಂಟು ಪೆನ್ಸನ್, ಆರೋಗ್ಯ ಇಲಾಖೆಯ ಸಮೀಕ್ಷೆ ಮಾಡುವಂತೆ ಒತ್ತಡ ಹಾಕುವದನ್ನು ನಿಲ್ಲಿಸಬೇಕು ಎಂಬ ಇನ್ನಿತರ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಮೂಲಕ ನೀಡೀದರು.
ಅಂಗನವಾಡಿ ಸಂಘಟನೆಯ ಮುಖಂಡರಾದ ಡಿ.ಹೆಚ್ ಕಂಬಳಿ, ತಿಪ್ಪಯ್ಯ ಶೆಟ್ಟಿ, ಲಕ್ಷ್ಮೀ ದಡೇಸೂಗೂರ, ಗೌರಮ್ಮ, ಶಾಂತಾ, ಅಧಿಲಕ್ಷ್ಮೀ, ರತ್ನಮ್ಮ, ಸೇರಿದಂತೆ ಇನ್ನಿತರು ಪ್ರತಿಭಟನೆಯಲ್ಲಿ ಭಾಗವಸಿದ್ದರು.