ಬೇಡಿಕೆಗಳ ಈಡೇರಿಸಲು ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಶಹಾಪುರ:ನ.27:ಕೃಷಿ ಕಾಯ್ದೆ, ವಿದ್ಯುತ್ತು ತಿದ್ದುಪಡಿ ಮಸೂದೆ ಪಾರ್ಲಿಮೆಂಟಿನಲ್ಲಿ ಹಿಂಪಡೆದು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಿ, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜನವಾರ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗಳು ರದ್ದು ಮಾಡುವ ಜೊತೆಗೆ ಹಲವು ಬೇಡಿಕೆ ಇಡೇರಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಯಾದಗಿರಿ ಜಿಲ್ಲಾ ಸಮಿತಿ ವತಿಯಿಂದ ಶಹಾಪುರ ತಾಲೂಕಿನ ಹತ್ತಿಗುಡುರು ಹತ್ತಿರ ಶ್ರೀರಂಗಪಟ್ಟಣ &ಬೀದರ್ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿ ತಹಸಿಲ್ದಾರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಉಪಾಧ್ಯಕ್ಷ ಚನ್ನಪ್ಪ ಆನೇಗುಂದಿ ಮಾತನಾಡಿ, ಬಾರಿ ಮಳೆಯಿಂದಾಗಿ ಹತ್ತಿ, ಮೇಣಸಿನಕಾಯಿ, ತೊಗರಿ, ಭತ್ತ ಸೇರಿ ಹಲವು ಬೆಳೆಗಳು ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಪ್ರತಿ ಎಕರೆಗೆ 50 ಸಾವಿರ ಪರಿಹಾರ ವದಗಿಸಬೇಕು ಎಂದು ಆಗ್ರಹಿಸಿದರು.

ಇದೇ ಸಂಧರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣಗೌಡ ಗೂಗಲ್, ನಾಗರತ್ನ ಪಾಟೀಲ್, ಎಸ್.ಎಂ ಸಾಗರ್, ಜೈಲಾರ್ ತೋಟದ ಮನೆ, ರಂಗಮ್ಮ ಕಟ್ಟಿಮನಿ, ಧರ್ಮಣ್ಣ. ನಾಗಣ್ಣ ಬಡಿಗೇರ್. ಶರಣು ಸೇರಿದಂತೆ ಹಲವಾರು ಸಂಘಟನೆಯ ಮುಖಂಡರು ಇದ್ದರು.