(ಸಂಜೆವಾಣಿ ವಾರ್ತೆ)
ಶಹಾಪೂರ:ಜು.4:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಉಮಕಾಂತ ಹಳ್ಳಿ ಅವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ, ಕೃಷಿ ಸಾಲ ನೀತಿ ಬದಲಾಗಬೇಕು. ರೈತನ ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಶೇ.75 ರಷ್ಟು ಸಾಲ ನೀಡಬೇಕು. ಕೃಷಿ ಉತ್ಪಾದನೆಗೆ ಬಡ್ಡಿ ರಹಿತ ಸಾಲ ನೀಡಬೇಕು. ಕಳಪೆ ರಸಗೊಬ್ಬರ, ಕೀಟನಾಶಕ ಮಾರಾಟ ಮಾಡುವುದನ್ನು ತಡೆಗಟ್ಟಬೇಕು. ಜಿಲ್ಲೆಯಲ್ಲಿ ಸಾವಿರಾರು ರೈತರು ಹತ್ತಾರು ವರ್ಷಗಳಿ0ದಲೂ ಸಾಗುವಳಿ ಮಾಡಿಕೊಂಡು ಹೋಗುತ್ತಿರುವ ಜಮೀನುಗಳಿಗೆ ಸಾಗುವಳಿ ಪತ್ರವನ್ನು ನೀಡದೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗುವ ಬೆಳೆಗೆ ಪರಿಹಾರ ಧನ ಭರಿಸುವುದು, ಜೀವ ಹಾನಿಗೆ ಕನಿಷ್ಠ 50 ಲಕ್ಷ ರು. ಪರಿಹಾರ ನೀಡುವುದು ಸೇರಿದಂತೆ ರೈತರ ತುರ್ತು ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಬೇಡಿಕೆಗಳನ್ನು ಈಡೇರಿಸ ಬೇಕೆಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದರು.
ಶಹಾಪುರ ನಗರದಲ್ಲಿ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ತಹಸೀಲ್‍ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ದುಬಾರಿ ಬೆಲೆಗೆ ಹತ್ತಿ ಬೀಜ ಮಾರಾಟ ಮಾಡಿದ ನ್ಯೂ ಕರ್ನಾಟಕ ಆಗೋ ಕೇಂದ್ರ ಮತ್ತು ನಗರೇಶ್ವರ ಆಗೋ ಕೇಂದ್ರಗಳ ಪರವಾನಿಗೆ ರದ್ದು ಮಾಡಿದ್ದ ಜಂಟಿ ಕೃಷಿನಿರ್ದೇಶಕರು ಮತ್ತೆ ಪರವಾನಗಿ ಮುಂದುವರೆಸಲು ಸಾವನ್ನಪ್ಪಿದ್ದು, ತಕ್ಷಣ ಆದೇಶಿಸಿದ್ದು, ಇದು ಖಂಡನೀಯ. ಕೂಡಲೇ ಅಂಗಡಿ ಗಳನ್ನು ಶಾಶ್ವತವಾಗಿ ಬಂದ್ ಮಾಡಬೇಕು ಹಾಗೂ ಜಂಟಿ ಕೃಷಿ ನಿದೇಶಕರ ಮೇಲೆ ಕಾನೂನು ಕ್ರಮ ತೆಗೆದು ಕೊಳ್ಳಬೇಕು. ರೈತ ಮುಖಂಡರ ಮೇಲೆ ಆರೋಪ ಮಾಡಿದ ಆಗೋ ಮಾಲೀಕ ಮುಜಾದ್ದಿ ಹುಸೇನ್
ಹೋಗಿ ಅವರ ಮೇಲೆ 420 ಕೇಸ್ ದಾಖಲಿಸಿಕೊಂಡು ರೈತರನ್ನು ರಕ್ಷಿಸಬೇಕು. ರಸ್ತಾಪುರ ಗ್ರಾಮದ ಮಾಳಪ್ಪ ಟಪ್ಪೇದಾರ ಅವರಿಗೆ ಸೇರಿದ ಕುರಿಗಳು ವಿದ್ಯುತ್ ತಗುಲಿ ಪರಿಹಾರ ನೀಡಬೇಕು. ಕೂಲಿಕಾರರಿಗೆ ನರೇಗಾ ಯೋಜನೆಯ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಕೆಲಸ
ಎಸ್.ಎಂ. ಸಾಗರ, ಭೀಮಣ್ಣ ಟಪ್ಪೇದಾರ, ತಮ್ಮಣ್ಣ ಜಾಗೀರದಾರ, ರಾಜೇಶ್ವರ ಬಾಳಿ ಸೇರಿದಂತೆ ರೈತರು, ಕೂಲಿಕಾರ್ಮಿಕರು ಇದ್ದರು.