ಬೇಡಿಕೆಗಳ ಈಡೇರಿಕೆಗೆ ಮನವಿ

ನವಲಗುಂದ,ಜು.10: 7ನೇ ವೇತನ ಆಯೋಗದ ವರದಿ ಜಾರಿ, ,ಎನ್.ಪಿ.ಎಸ್ ರದ್ದು, ಹಳೇ ಪಿಂಚಣಿ ಯೋಜನೆ ಜಾರಿ ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸಿ ಸರ್ಕಾರಿ ಆದೇಶ ಹೊರಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಬಿ.ಕೊಪ್ಪದ ನೇತೃತ್ವದಲ್ಲಿ ನೌಕರರ ನಿಯೋಗ ತಾಲ್ಲೂಕಾ ಪಂಚಾಯತಿ ಅವರಣದಲ್ಲಿರುವ ಕಚೇರಿಗೆ ತರಳಿ ಶಾಸಕ ಎನ್.ಎಚ್.ಕೊನರಡ್ಡಿಯವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಶಾಸಕರು ಮಾತನಾಡಿ ” ಸರ್ಕಾರದ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸುವರು ಎಂಬ ನಂಬಿಕೆಯಿದೆ. ತಮ್ಮ ಬೇಡಿಕೆಯ ಬಗ್ಗೆ ನಾನೂ ಕೂಡಾ ಸಿದ್ದರಾಮಯ್ಯನವರಿಗೆ ಮನವಿ ಮಾಡುವೆ ಎಂದು ಭರವಸೆ ನೀಡಿದರು.”
ಇದಕ್ಕೂ ಮೊದಲು ತಹಶೀಲ್ದಾರ ಸುಧೀರ ಸಾಹುಕಾರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನಕಾರ್ಯದರ್ಶಿ ದ್ಯಾಮನಗೌಡ. ಹುಲ್ಲೂರ, ಖಜಾಂಚಿ ಸಹದೇವ.ಪೂಜಾರ, ಚನ್ನಪ್ಪಗೌಡ್ರ, ಸಿದ್ದು.ಬೋರಕ್ಕನವರ, ಶಂಕರ ಪುರೋಹಿತ. ನಾಗರಾಜ, ಕರಿಸಕ್ರನವರ. ಗಣೇಶ ಹೊಳೆಯಣ್ಣವರ, ಎನ್.ಎಸ್.ತಾಳಿಕೋಟಿಮಠ, ಎಸ್.ಎಪ್.ನೀರಲಗಿ, ಮಲ್ಲಿಕಾರ್ಜುನ ವಗ್ಗರ. ಪಿ.ಸಿ.ಸೂರಪ್ಪನವರ.
ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಕಲ್ಲಯ್ಯ.ಹೊಸಮನಿ, ಎ.ಎಂ.ನಧಾಪ, ವಿ.ಸಿ.ಹಳ್ಳದ. ವಿ.ಎಂ.ಹೆರಕಲ್.ಬಾಳನಗೌಡ್ರ, ಸುನೀಲ, ಬಳ್ಳಾರಿ, ಹಾದಿಮನಿ, ಪಿ.ಕೆ.ಹೀರೇಗೌಡ್ರ, ಲಿಂಗರಾಜ ಕಮತ್, ಇತರರು ಇದ್ದರು