ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ


ಲಕ್ಷ್ಮೇಶ್ವರ,ಸೆ.26: ತಾಲೂಕಿನ ಬಾಲೆಹೊಸೂರು ಗ್ರಾಮದ ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿಯ ನೂರಾರು ಸದಸ್ಯರುಗಳು ತಹಶೀಲ್ದಾರ್ ಕಾರ್ಯಾಲಯಕ್ಕೆ ಬಂದು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರದಲ್ಲಿ ಬಾಲೆಹೊಸೂರಿನಿಂದ ಸೂರಣಗಿ ಹಾಲಗಿ ತಂಗೋಡ ಇಚ್ಚಂಗಿ ಮಾದಾಪುರ ಸಂಪರ್ಕಿಸುವ ಎಲ್ಲ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಜನ ಜಾನುವಾರು ವಾಹನಗಳು ಅಡ್ಡಾಡದಂತ ಸ್ಥಿತಿ ನಿರ್ಮಾಣವಾಗಿದ್ದು ರಸ್ತೆಗೆ ಹಿಡಿ ಮಣ್ಣು ಹಾಕಲು ದಿಕ್ಕಿಲ್ಲದಂತಾಗಿದೆ.
ಪ್ರತಿದಿನ ಲಕ್ಷ್ಮೇಶ್ವರಕ್ಕೆ ಹಾವೇರಿ ಜಿಲ್ಲೆಯ ಸುತ್ತಮುತ್ತಲ ತಾಲೂಕುಗಳ ಜನರು ಬಾಲೆಹೊಸೂರು ಮಾರ್ಗವಾಗಿ ವ್ಯಾಪಾರ ವಹಿವಾಟಿಗೆ ಮತ್ತು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗಾಗಿ ಹೋಗುತ್ತಿದ್ದಾರೆ ಆದರೆ ಈ ರಸ್ತೆಯ ಮೇಲೆ ಹಾದು ದ್ವಿಚಕ್ರ ವಾಹನ ಬಸ್ಸುಗಳಲ್ಲಿ ಹೊರಟವರು ಅಪಾಯ ಎದುರಿಸುವಂತಾಗಿದೆ. ಈ ರಸ್ತೆಗಳಿಗೆ ಮಣ್ಣು ಹಾಕಲು ದಿಕ್ಕಿಲ್ಲದಂತಾಗಿದೆ.
ಆದ್ದರಿಂದ ಅಕ್ಟೋಬರ್ 10ರೊಳಗಾಗಿ ಲೋಕೋಪಯೋಗಿ ಇಲಾಖೆಯವರು ರಸ್ತೆಯ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದಿದ್ದರೆ ಗ್ರಾಮಸ್ಥರು ಹಾಗೂ ಹೋರಾಟ ಸಮಿತಿಯ ಸದಸ್ಯರೊಡಗೂಡಿ ವಾಹನ ಸಂಚಾರ ಬಂದ್ ಮಾಡಿ ರಸ್ತೆ ತಡೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಬಸವರಾಜ ಹನುಮರೆಡ್ಡಿ ಅವರು ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಮುಂದಾಗುವ ಅಹಿತಕರ ಘಟನೆಗಳಿಗೆ ಅಧಿಕಾರಿಗಳು ಜವಾಬ್ದಾರರು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯಿತಿ ಮಾಜಿ ಸದಸ್ಯ ನಿಂಗಪ್ಪ ಜಾಲವಾಡಗಿ ಮುಖಂಡರಾದ ಭರತರಾಜ್ ಗುಡಿಗೇರಿ ನಾಗರಾಜ್ ಮುತ್ತನಾಳ ಹನುಮಂತ್ ಸವಣೂರ ಜಗದೀಶ್ ಜೋಗೆರ ಯಮನಪ್ಪ ಕಡೆಮನಿ ಮಹಾಂತೇಶ್ ಈರಗಾರ ಫಕೀರಯ್ಯ ಹಿರೇಮಠ ಶಿವಪುತ್ರಪ್ಪ ಮಾಯಕೊಂಡ ರಮೇಶ್ ಪೂಜಾರಿ ರಾಜೀವ್ ಬೆಂಚಳ್ಳಿ ಸಂತೋಷ್ ಬೆಂಚಳ್ಳಿ ಜಿಕೆ ದೇವರಮನಿ ಬಿ.ಜಿ. ಅರಳಿ ಕೋಟೆಪ್ಪ ಮಿಳ್ಳಿ ಪುಟ್ಟಪ್ಪ ಸುಣಗಾರ ಎನ್ ಎಂ ಜಟ್ಟೆಪ್ಪನವರ ಸೇರಿದಂತೆ ಅನೇಕರಿದ್ದರು.