ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರ ಮನವಿ

ನವಲಗುಂದ,ಜೂ28 : ಅಂಗನವಾಡಿ ಕಾರ್ಯಕರ್ತೆಯರನ್ನು ಇತರೆ ಇಲಾಖೆಗಳ ಕೆಲಸಕ್ಕೆ ಬಳಸಿಕೊಳ್ಳುವುದು, ಹಾಳಾದ ಮೊಬೈಲ್ ವಾಪಸ್ ಪಡೆದು ಹೊಸ ಮೊಬೈಲ್ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಸಿಡಿಪಿಓ ಕಚೇರಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸರಕಾರದ ಸಮೀಕ್ಷೆಸೇರಿದಂತೆ ಇತರೆ ಕೆಲಸಗಳನ್ನು ಅಂಗನವಾಡಿ ಕಾರಕರ್ತೆಯರಿಗೆ ನೀಡಿ ಕೆಲಸ ಮಾಡದೇ ಇದ್ದರೆ ಗೌರವ ಧನವನ್ನು ಕಡಿತಗೊಳಿಸುತ್ತೇವೆಂದು ಬೆದರಿಕೆ ಹಾಕುತ್ತಾರೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೂ ಹಲವಾರು ವರ್ಷಗಳಿಂದ ನಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ನವಲಗುಂದ ಹಾಗೂ ಅಣ್ಣಿಗೇರಿ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪಟ್ಟಣದ ನೀಲಮ್ಮನ ಕೆರೆಯಿಂದ ಪ್ರತಿಭಟನಾ ಮೆರವಣಿಗೆ ಮುಖಾಂತರ ತೆರಳಿ ಸಿಡಿಪಿಓ ಕಚೇರಿ ಅಧಿಕಾರಿಗಳಿಗೆ ಮನವಿ
ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಂಕ್ರಮ್ಮ ಹುಬ್ಬಳ್ಳಿ, ಗಿರಿಜಾ ಹುಲ್ಲೂರ, ಮಂಜುಳಾ ಒಂಟೇಲಿ, ಶಿವಲೀಲಾ ಅಂಗಡಿ, ಸಾವಿತ್ರಿ ಪಾಟೀಲ, ಸೈಯದಮ್ಮಾ ಎಲಿಗಾರ, ಗಿರಿಜಾ ಕಿತ್ತೂರ, ರೇಣುಕಾ ಶ್ರೀಹರಿ, ರಂಜಾನಬೀ ಮುಕಾಶಿ, ಸಾಹೀರಾಬಾನು ಖಾಜಿ, ಜಯಲಕ್ಷ್ಮೀ ಲಾಂಡೆ, ಮಂಜುಳಾ ನಾಗನೂರ, ಗಂಗಮ್ಮ ಭದ್ರಾಪುರ, ನಿಂಗಮ್ಮ ಸರಗದ ಇನ್ನಿತರರು ಉಪಸ್ಥಿತರಿದ್ದರು.