ಬೇಡಿಕೆಗಳ ಈಡೇರಿಕೆಗಾಗಿ ಕೂಡ್ಲಿಗಿ ಎಐಟಿಯುಸಿ ಪ್ರತಿಭಟನೆ.

ಕೂಡ್ಲಿಗಿ.ಸೆ. 25 :-   ಅಂಗನವಾಡಿ ಫೆಡರೇಶನ್ ಕಾರ್ಯಕರ್ತರು ಹಾಗೂ ಬಿಸಿಯೂಟ ಪೆಡರೇಷನ್  ಕಾರ್ಯಕರ್ತರು   ಎ.ಐ.ಟಿ.ಯು.ಸಿ ಮುಖಂಡ ಹೆಚ್.ವೀರಣ್ಣ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಆಗ್ರಹಿಸಿ ಕೂಡ್ಲಿಗಿ   ತಹಶಿಲ್ದಾರ ಮುಖೇನಾ  ದೇಶದ ಪ್ರಧಾನಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರದ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ,ಘೋಷಣೆಗಳನ್ನು ಕೂಗಿ ಪ್ರತಿಭಟಿಸಿ ಅಲಹಾಬಾದ್ ನ್ಯಾಯಾಲಯದ ತೀರ್ಪಿನ ಪ್ರಕಾರ
ಕನಿಷ್ಠ ವೇತನ 20 ಸಾವಿರ ಮಾಡುವುದು ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆ ಈಡೇರಿಕೆಗೆ ಆಗ್ರಹಿಸುತ್ತ ಕೂಡ್ಲಿಗಿ ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್ ಮತ್ತು ಸಹಾಯಕಿರ ಫೆಡರೇಶನ್ ಎಐಟಿಯುಸಿ, ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಸದಸ್ಯರು ಕೂಡ್ಲಿಗಿ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಹೆಚ್ ವೀರಣ್ಣ ಹಾಗೂ ಇತರೆ ಪ್ರತಿಭಟನಾ ಮುಖಂಡರು ಮಾತನಾಡುತ್ತ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ವೇತನ ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಹಿಂದೆ ಹೇಳಿಕೆ ನೀಡಿ ಪ್ರಚಾರ ಪಡೆದುಕೊಂಡಿದ್ದವು.
 ಆದರೆ ಒಮ್ಮೆಯೂ ನಿಗದಿತ ಸಮಯಕ್ಕೆ ಗೌರವ ಧನ ನೀಡಿಲ್ಲ. ಬೇಸಿಗೆ ರಜೆಯ ಅವಧಿಯನ್ನು ಒಂದು ತಿಂಗಳಿಗೆ ಹೆಚ್ಚಿಸಬೇಕು.
ರಾಜ್ಯದಾದ್ಯಂತ 80 ಸಾವಿರ ಅಂಗನವಾಡಿ ಕೇಂದ್ರಗಳಿದ್ದು,
1.20 ಲಕ್ಷ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ.
ಸರ್ಕಾರ ಈವರೆಗೆ ಗೌರವಧನ ಮಾತ್ರ ನೀಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಸೇರಿದಂತೆ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಸರ್ಕಾರ ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ 21 ಸಾವಿರ ಕನಿಷ್ಠ ವೇತನ ಜಾರಿಗೊಳಿಸಬೇಕು ಕಾಯಂ ನೌಕರರು ಎಂದು ಪರಿಗಣಿಸಬೇಕು ನಿವೃತ್ತಿ ವೇತನ ಜಾರಿ ಮಾಡಬೇಕು   ಮೃತರಾದ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಆಶಾ ಕಾರ್ಯಕರ್ತೆಯರು ಆರೋಗ್ಯ ಕಾರ್ಯಕರ್ತೆಯರ   ಕುಟುಂಬಗಳಿಗೆ ಐವತ್ತು ಸಾವಿರ ರೂ ಪರಿಹಾರ ನೀಡಿ ಘೋಷಣೆ ಮಾಡಬೇಕು ಅಂಗನವಾಡಿ ಕಾರ್ಯಕರ್ತರನ್ನು ಕೊರೋನಾ ವಾರಿಯರ್ಸ್ ಎಂದು ಘೋಷಣೆ ಮಾಡಬೇಕು ಕೂಡ್ಲಿಗಿ ತಾಲೂಕಿನಲ್ಲಿ ಗ್ಯಾಸ್ ಸೇಫ್ಟಿ ವಾಲ್ 2000 ಸಿಡಿಪಿಓ ಮೇಲ್ವಿಚಾರಕಿಯರು ಕಾರ್ಯಕರ್ತೆಯರಿಂದ ಪಡೆದಿದ್ದು ಗ್ಯಾಸ್ ಸೇಫ್ಟಿ ವಾಲಿನ ಬೆಲೆ 1200 ಎಂದು ಗ್ಯಾಸ್ ಕಂಪನಿಯವರು ಹೇಳುತ್ತಿದ್ದು ಕೋವಿಡ್ 19 ಕೆಲಸ ಮಾಡಲು ಸರ್ಕಾರ .1000 ರೂಪಾಯಿ ಅಂಗನವಾಡಿ ಕೇಂದ್ರಗಳ ಮುಂದೆ ಕಿಚನ್ ಗಾರ್ಡನ್ ನಿರ್ಮಿಸಲು 1000 ಸಮಿತಿ ಖಾತೆಗೆ ಜಮಾ ಮಾಡಿದ್ದು ಹಣವನ್ನು ಈಗಾಗಲೇ ಸೇಫ್ಟಿ ಗ್ಯಾಸ್ ವಾದಗಳಿಗೆ ಎಂದು ಮೇಲ್ವಿಚಾರಕಿಯರು ಅಂಗನವಾಡಿ ಕಾರ್ಯಕರ್ತರಿಂದ ಪಡೆದಿದ್ದು ಪುನಹ ಮತ್ತೆ 1000 ನೀಡಬೇಕೆಂದು ಎಂದು ಕೇಳುತ್ತಿದ್ದು ಇದರ ಬಗ್ಗೆ ಕ್ರಮ ಕೈಗೊಂಡು ಸಂಬಂಧಪಟ್ಟವರ ಮೇಲೆ ಶಿಸ್ತುಕ್ರಮ ಜರುಗಿಸಬೇಕು ಕೆಲವು ಮೇಲ್ವಿಚಾರಕರು ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದು ಹಾಗೂ ಹಣ ನೀಡುವಂತೆ ಒತ್ತಾಯಿಸುತ್ತಿದ್ದು  ಪ್ರತಿತಿಂಗಳು ಕಾರ್ಯಕರ್ತರಿಂದ ವಸೂಲಿ ಮಾಡುತ್ತಿದ್ದಾರೆ  ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಬಿಸಿ ಊಟ ಕಾರ್ಯಕರ್ತೆಯರಿಗೆ ನಾಲ್ಕು ತಿಂಗಳು ವೇತನ ಬಿಡುಗಡೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ವೇತನ ಸಹಿತ ರಜೆ ನೀಡಬೇಕೆಂದು ಪ್ರತಿಭಟನಾಕಾರರ ಮುಖಂಡರು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತರ ಫೆಡರೇಶನ್ ಬಿಸಿಯೂಟ ಕಾರ್ಯಕರ್ತೆಯರ ಫೆಡರೇಶನ್ ಪದಾಧಿಕಾರಿಗಳಾದ ಅಧ್ಯಕ್ಷರಾದ ಮಹಾಂತಮ್ಮ ಕಾರ್ಯದರ್ಶಿ ಸುಮಾ ಖಜಾಂಚಿ ರತ್ನಮ್ಮ ಎನ್ ಬಸಮ್ಮ ನೇತ್ರಾವತಿ ಶಿವಲೀಲಾ ಗಾಯಿತ್ರಿ ಕವಿತಾ ಕೆ.ಪದ್ಮಾ,   ಕೆ. ರೇಣುಕಮ್ಮ ಗಜಾಪುರ ಜಿಲ್ಲಾ, ದೇವದಾಸಿ ಸಂಘಟನೆಯ  ಅಧ್ಯಕ್ಷರು ಗಜಾಪುರ ವಿಠಲ್, ಅಖಿಲ ಭಾರತ ಯುವಜನ ಫೆಡರೇಷನ್ ಖಜಾಂಚಿ ಟ್ಯಾಂಕಿ ತಿಪ್ಪೇಸ್ವಾಮಿ, ಸಿಪಿಐ ಸಹ ಕಾರ್ಯದರ್ಶಿ ಮಹಿಳಾ ಮುಖಂಡರಾದ ಬಿ.ರೇಣುಕಮ್ಮ, ಕೊಟ್ಟೂರಿನ ದೇವದಾಸಿ ಸಂಘಟನೆ ಬಿಸಿಊಟ ಸಂಘಟನೆಯ ಸುಜಾತ ರೂಪ ಮಂಗಳಮ್ಮ ಜಯಮ್ಮ ಉಷಾರಾಣಿ ಮಂಜುಳಾ ಗೌರಮ್ಮ ರಾಧಮ್ಮ ನಾಗವೇಣಿ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು  ಉಪಸ್ಥಿತರಿದ್ದರು.
Attachments area