ಬೇಡಿಕೆಗಳು ಈಡೇರಿಸುವ ತನಕ ಹೆಚ್ಚುವರಿ ಕೆಲಸಗಳನ್ನು ಮಾಡುವುದಿಲ್ಲ ; ಸುವರ್ಣಾ ಕಮತಗಿ

ಅಥಣಿ (ಕಾಗವಾಡ) :ಮಾ.23: ಪೋಷಣಾ ಪಕ್ವಾಡ ಮತ್ತು ಹೆಚ್ಚುವರಿ ಕೆಲಸಗಳನ್ನು ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಮಾಡುವುದಿಲ್ಲ ಎಂದು ಸಿಐಟಿಯು ಅಂಗನವಾಡಿ ನೌಕರರ ಸಂಘದ ಕಾಗವಾಡ ತಾಲೂಕಾ ಅಧ್ಯಕ್ಷೆ ಸುವರ್ಣಾ ಕಮತಗಿ ಹೇಳಿದರು,
ಅವರು ಇಂದು ಐನಾಪೂರ ಪಟ್ಟಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಅಂಗನವಾಡಿ ನೌಕರರು ಕಡಿಮೆ ಸವಲತ್ತುಗಳಿಗೆ ದುಡಿಯುತ್ತಿದ್ದರು.ಕೂಡ ಕೊರೋನಾ ಸಂದರ್ಭದಲ್ಲಿ ಸರಕಾರ ಸೂಚನೆ ಕೊಟ್ಟ ಕೂಡಲೇ ಯಾವುದೇ ಷರತ್ತುಗಳಿಲ್ಲದೆ ತಮ್ಮ ಜೀವದ ಹಂಗನ್ನು ತೊರೆದು ಕೆಲಸವನ್ನು ನಿರ್ವಹಿಸಿದ್ದಾರೆ, ಕೊರೋನಾದಂತಹ ಸಾಂಕ್ರಾಮಿಕ ರೋಗದ ಭಯಂಕರತೆ ಇದ್ದಾಗಲೂ ಮನೆ ಮನೆಗೆ ಆಹಾರ ಸಾಮಗ್ರಿಗಳನ್ನು ಹಂಚುವುದು ಹಾಗು ಸರ್ವೇ ಕೆಲಸಗಳನ್ನು ಕೂಡಾ ನಿಭಾಯಿಸಿದ್ದಾರೆ ಆದರೆ ಈ ಬಾರಿ ಬಜೆಟ್ಟಿನಲ್ಲಿ ಇಲಾಖೆ ಶಿಫಾರಸು ಕಳಿಸಿದ್ದರೂ ಕೂಡಾ ಪರಿಗಣಿಸದೆ ಅಂಗನವಾಡಿ ನೌಕರರನ್ನು ನಿರ್ಲಕ್ಷಿಸಲಾಗಿದೆ ಬದಲಿಗೆ ದಿನೇ ದಿನೇ ಹೆಚ್ಚು ಒತ್ತಡದ ಕೆಲಸ ನೀಡುತ್ತಿದ್ದಾರೆ ಎಂದರು, ಈ ಬಗ್ಗೆ ಕಾಗವಾಡ ಸಿಡಿಪಿಓ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸುವರ್ಣಾ ಕಮತಗಿ ಹೇಳಿದರು,
ಈ ವೇಳೆ ಸಿಐಟಿಯು ಅಂಗನವಾಡಿ ನೌಕರರ ಸಂಘ ಕಾಗವಾಡ ತಾಲೂಕಾ ಕಾರ್ಯದರ್ಶಿ ಸವಿತಾ ಹೀರೆಮಠ ಮಾತನಾಡಿ ಹೆಚ್ಚುವರಿ ಕೆಲಸಗಳಾದ, ಬಿಎಲ್ಓ, ಭಾಗ್ಯಲಕ್ಷ್ಮಿ, ಮಾತೃ ವಂದನಾ, ಸ್ತ್ರೀ ಶಕ್ತಿ, ಸೇರಿದಂತೆ ದಿನಕ್ಕೊಂದು ರೀತಿಯ ಎಲ್ಲಾ ಸರ್ವೇಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಂದ ಮಾಡಿಸಲಾಗುತ್ತದೆ ಮಾಡಲು ನಿರಾಕರಿಸಿದರೆ ಗೌರವಧನ ತಡೆಹಿಡಿಯುವದು ನೋಟೀಸ್ ನೀಡುವ ಬೆದರಿಕೆ ಹಾಕಲಾಗುತ್ತಿದೆ ಸರ್ಕಾರದ ಆದೇಶ ಪರಿಗಣಿಸಿ ಹೆಚ್ಚುವರಿ ಕೆಲಸಗಳನ್ನು ಮಾಡಿಸ ಬಾರದಾಗಿ ಮತ್ತೊಮ್ಮೆ ತಮ್ಮನ್ನು ಕೋರಲಾಗಿದೆ, ಅಲ್ಲದೆ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಮಾರ್ಚ್ 3 ರ ಸಭೆಯಲ್ಲಿ ಚರ್ಚಿಸಿದಂತೆ ಮತ್ತು ಮಾರ್ಚ್ 4 ರ ನಮ್ಮ ಹೋರಾಟದ ಸ್ಥಳದಲ್ಲಿ ಸಚಿವರು ಬೇಡಿಕೆ ಈಡೇರಿಕೆಗಳ ಬಗ್ಗೆ ಭರವಸೆ ನೀಡಿದಂತೆ ಜಾರಿ ಆಗುವವರೆಗೆ, ಪೋಷಣ್ ಪಕ್ವಡ್, ಮತ್ತು ಇತರ ಹೆಚ್ಚುವರಿ ಕೆಲಸ, ಮಿನಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ಇಲ್ಲದಿರುವುದರಿಂದ ಸಹಾಯಕಿ ನೇಮಿಸಬೇಕು ಎಂದು ಹೇಳಿದರು
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಅಂಗನವಾಡಿ ನೌಕರರ ಸಂಘ ಕಾಗವಾಡ ತಾಲೂಕಾ ಉಪಾಧ್ಯಕ್ಷೆ ಆಕಾಶನಿ ಗುಂಜಾಳೆ, ಅಂಗನವಾಡಿ ಕಾರ್ಯಕರ್ತೆಯರಾದ ಕಲಾವತಿ ಬಾನೆ, ಸುರೇಖಾ ಚಿಂಚಲಿ, ರಾಜಶ್ರೀ ಶೇಗುಣಸಿ, ಯಲ್ಲವ್ವಾ ನಾವಿ, ಸುನೀತಾ ಪಾಟೀಲ, ಸುಮಿತ್ರಾ ಮುಗಳಿ, ಉಪಸ್ಥಿತರಿದ್ದರು,