ಬೇಡರ ಜಂಗಮಕ್ಕೆ ಸಂವಿಧಾನ ಬದ್ಧ ಹಕ್ಕೊತ್ತಾಯಿಸಿ ಬೃಹತ್ ಱ್ಯಾಲಿ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.20: ಕೊಟ್ಟೂರು ಪಟ್ಟಣದ ತಾಲೂಕು ಬೇಡರ ಜಂಗಮದ ವತಿಯಿಂದ ಸಂವಿಧಾನ ಬದ್ಧ ಹಕ್ಕೊತ್ತಾಯಿಸಿ ಬೃಹತ್ ಱ್ಯಾಲಿಯನ್ನು ಕೈಗೊಳ್ಳಲಾಯಿತು.
ಬಯಲು ಬಸವೇಶ್ವರ ದೇವಸ್ಥಾನದಿಂದ ತಾಲೂಕು ಆಡಳಿತದ ವರೆಗೆ ಬೃಹತ್ ಱ್ಯಾಲಿಯನ್ನು ಕೈಗೊಳ್ಳಲಾಯಿತು.
ಫ್ರೀಡಂ ಪಾರ್ಟ್ ನಲ್ಲಿ ರಾಜ್ಯದ ಸಮಸ್ತ ಬೇಡರ ಜಂಗಮ ಸಮಾಜದವರು ರಾಜ್ಯ ಬೇಡರ ಸಂಗಮ ಒಕ್ಕೂಟ ಅಧ್ಯಕ್ಷರಾದ ಹಿರೇಮಠ ಇವರ ನೇತೃತ್ವದಲ್ಲಿ ಸತ್ಯ ಪ್ರತಿಪಾದನೆ ಹೋರಾಟವನ್ನು ಹಮ್ಮಿಕೊಂಡು ಸತ್ಯಾಗ್ರಹದಲ್ಲಿ ಎಲ್ಲಾ ಜಿಲ್ಲೆಯ ಮುಖಂಡರು ಮಠಾಧೀಶಗಳು, ಕರ್ನಾಟಕ ಸಮಗ್ರ ಬೇಡರ ಜಂಗಮದವರಿಗೆ ಸರ್ಕಾರದಿಂದ ಬೇಡರ ಜಂಗಮ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸದರಿ ಪ್ರತಿಭಟನೆಯನ್ನು ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರು 30/6/ 2022 ರಂದು ಮಧ್ಯಾಹ್ನ 3:00ಗೆ ಬಂದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹೇಳಿ ಸಾಯಂಕಾಲ 6 ಗಂಟೆಗೆ ಒಳಗೆ ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕೃತವಾಗಿ ಆದೇಶವನ್ನು ಹೊರಡಿಸಿ ಬೇಡರ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಆದೇಶ ನೀಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೂ ಈ ಭರವಸೆ  ಈಡೇರಿಯದ ಕಾರಣಕ್ಕಾಗಿ ಹಿರೇಮಠ ಇವರ ಮುಖ್ಯಮಂತ್ರಿಗಳ ಬಳಿ ಮನವಿ ಪತ್ರ ಸಲ್ಲಿಸಲು ಸತ್ಯಾಗ್ರಹ ಮಾಡಬೇಕೆಂಬ ಉದ್ದೇಶ ಹೊಂದಿ ಕಾಲದಡಿಗೆಯಲ್ಲಿ ತೆರಳುತ್ತಿರುವಾಗ ಅವರನ್ನು ಬಂಧಿಸಿದ್ದಾರೆ. ಇವರನ್ನು ಬಂಧಿಸಿದ್ದಕ್ಕೆ ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಸಚಿವರು ಕ್ಷಮೆ ಯಾಚಿಸಬೇಕು. ಸಂವಿಧಾನ ಬದ್ಧ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ಮಾನ್ಯ ತಹಶಿಲ್ದಾರರಾದ ಕುಮಾರಸ್ವಾಮಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಂಕರ್ ಸ್ವಾಮೀಜಿ ಮಹಲ್ ಮಠ ಕೊಟ್ಟೂರು, ಪಂಚಾಕ್ಷರಿ ಸ್ವಾಮೀಜಿ ಬೆಣ್ಣೆಹಳ್ಳಿ, ಸಿದ್ಧಲಿಂಗ ಶಿವಾಚಾರ್ಯ ಡೋಣೂರು ಚಾನುಕೋಟಿ ಮಠ ಕೊಟ್ಟೂರು, ಬೇಡರ ಜಂಗಮದ ತಾಲೂಕು ಅಧ್ಯಕ್ಷರಾದ ಮಂಜುನಾಥಯ್ಯ, ಸಂತೋಷ, ಪ್ರತಿಭಾ,ಕೊಟ್ರಮ್ಮ ಸುವರ್ಣಮ್ಮ,  ಹಾಗೂ ಇತರರು ಉಪಸ್ಥಿತರಿದ್ದರು