ಬೇಡಜಂಗಮ ಸಮಾಜ ಬಾಂಧವರಿಂದ ಪ್ರಾರ್ಥನೆ

ತಾಳಿಕೋಟೆ:ಎ.1: ಬೇಡ ಜಂಗಮ ಸಮಾಜದ ಹಿತ ಬಯಸಿ ಬೆಂಗಳೂರಿನ ಪ್ರೀಡಂ ಪಾರ್ಕನಲ್ಲಿ ಕಳೆದ 7 ತಿಂಗಳಿಂದ ನಿರಂತರ ಧರಣಿ ನಡೆಸಿ ಆನಾರೋಗ್ಯಕ್ಕೆ ಒಳಗಾಗಿರುವ ಬೇಡ ಜಂಗಮ ಸಮಾಜದ ಅಧ್ಯಕ್ಷ ಬಿ.ಡಿ.ಹಿರೇಮಠ ಅವರು ಬೇಗನ ಗುಣಮುಖರಾಗಲಿ ಎಂದು ತಾಳಿಕೋಟೆ ತಾಲೂಕಾ ಬೇಡ ಜಂಗಮ ಸಮಾಜ ಬಾಂದವರು ದೇವರಲ್ಲಿ ಪಾರ್ಥಿಸಿದರು.

ಈ ಸಮಯದಲ್ಲಿ ಬೇಡಜಂಗಮ ಸಮಾಜದ ಗೌರವಾಧ್ಯಕ್ಷ ಚಬನೂರಿನ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾತನಾಡಿ ರಾಜ್ಯದಲ್ಲಿ ಬೇಡ ಜಂಗಮ ಸಮಾಜವು ಆರ್ಥಿಕವಾಗಿ, ಸಮಾಜಿಕವಾಗಿ, ರಾಜಕೀಯವಾಗಿ ಹಿಂದೂಳಿದಂತಹ ಸಮಾಜವಾಗಿದೆ ಇಂತಹ ಸಮಾಜದ ನೇತೃತ್ವವಹಿಸಿದ್ದ ಬಿ.ಡಿ.ಹಿರೇಮಠ ಅವರು ಕಳೆದ 7 ತಿಂಗಳಿಂದ ಬೆಂಗಳೂರಿನಲ್ಲಿ ನಿರಂತರ ಧರಣಿ ನಡೆಸಿದ್ದಾರೆ ಅವರಿಗೆ ಈಗ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಅವರು ಬೇಗನೇ ಗುಣಮುಖರಾಗಿ ಬರಲಿ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಿಕೊಡುವಂತಹ ಶಕ್ತಿ ಅವರಿಗೆ ದೇವರು ಕಲ್ಪಿಸಿಕೊಡಲಿ ಎಂದು ಎಂದರು.

ಈ ಸಮಯದಲ್ಲಿ ಕೊಡೇಕಲ್ಲಶ್ರೀಗಳು, ನಾವದಗಿಶ್ರೀಗಳು, ಹಾಗೂ ಸಮಾಜದ ಮುಖಂಡರಾದ ಶರಣಯ್ಯ ಹಿರೇಮಠ, ಶಿವಲಿಂಗಯ್ಯ ಹಿರೇಮಠ, ಶ್ರೀಗುರು ಹಿರೇಮಠ, ಕೆ.ಎಂ.ಮಠ, ಕಾಶಿನಾಥ ಹಿರೇಮಠ, ಸೋಮಶೇಖರಯ್ಯ ಹಿರೇಮಠ, ರಾಜು ಹಿರೇಮಠ, ಈರಯ್ಯ ಹಿರೇಮಠ, ಪ್ರಕಾಶ ಹಿರೇಮಠ, ನಾಗಭೂಷಣ ಡೋಣೂರಮಠ, ರಾಜಶೇಖರ ಹಿರೇಮಠ, ಸೋಮಶೇಖರ ಹಿರೇಮಠ, ಕಾಶಿನಾಥ ಹಿರೇಮಠ, ಗಜದಂಡಯ್ಯ ಹಿರೇಮಠ ಮೊದಲಾದವರು ಪಾಲ್ಗೊಂಡಿದ್ದರು.