ಬೇಕೇ ಬೇಕು ದೊಡ್ಡ ಜಾತ್ರೆ ಬೇಕು

ನಂಜನಗೂಡು. ಮಾ.19: ಇದೇ ತಿಂಗಳು 26 ರಂದು ನಡೆಯುವ ದೊಡ್ಡ ಜಾತ್ರೆಗೆ ಅವಕಾಶ ಮಾಡಿಕೊಡಬೇಕೆಂದು ಶ್ರೀಕಂಠೇಶ್ವರ ಯುವಕರ ಭಕ್ತ ಮಂಡಳಿ ಹಲವು ದಿನಗಳಿಂದಲೂ ಒತ್ತಾಯ ಮಾಡುತ್ತಿದ್ದಾರೆ ನಿನ್ನೆ ಸಂಜೆ ದೇವಸ್ಥಾನ ಮುಂಭಾಗ ಸಭೆ ಸೇರಿ ಜಾತ್ರೆ ಬಗ್ಗೆ ಚರ್ಚಿಸಲಾಯಿತು.
ಈ ಸಂಧರ್ಭದಲ್ಲಿ ಕೆಲವು ಹಿರಿಯರು ಸಲಹೆಗಳನ್ನು ನೀಡಿದರು. ಮೈಸೂರಿಗೆ ಆಗಮಿಸುತ್ತಿರುವ ಉಸ್ತುವಾರಿ ಸಚಿವರು ಸೋಮಶೇಖರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸುವುದು. ಸ್ಥಳದಲ್ಲಿ ಅವರಿಂದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವಂತೆ ತಿಳಿಸುವುದು. ಇದಕ್ಕೆ ಒಪ್ಪದೇ ಇದ್ದಲ್ಲಿ ನಾಳೆ ನಗರಾದ್ಯಂತ ಅಂಗಡಿಗಳನ್ನು ಸ್ವಯಂ ಘೋಷಿತವಾಗಿ ಬಂದ್ ಮಾಡಲು ಮನವರಿಕೆ ಮಾಡಿಕೊಡುವುದು ನಂಜನಗೂಡಿನಿಂದ ಮೈಸೂರಿಗೆ ತೆರಳಿ ಸಚಿವರನ್ನು ಭೇಟಿ ಮಾಡುವುದು ಈ ರೀತಿ ನಿರ್ಣಯಗಳನ್ನು ಮಾಡಿಕೊಂಡರು.
ಚಂದ್ರಶೇಖರ್ ಮಾತನಾಡಿ ಕಳೆದ ಬಾರಿ ಕರೋನವೈರಸ್ ನಿಂದ ಯಾವ ಜಿಲ್ಲೆಗಳನ್ನು ಕೂಡ ಜಾತ್ರೆಗಳು ನಡೆಯಲಿಲ್ಲ ಆದರೆ ಈ ಬಾರಿ ನೆನ್ನೆ ತನಕ ಎಲ್ಲಾ ಕಡೆ ಜಾತ್ರೆಗಳು ನಡೆಯುತ್ತಿದೆ ಆದರೆ ನಂಜನಗೂಡಿನಲ್ಲಿ ಮಾತ್ರ ನಿಷೇಧ ಹೇರಲಾಗಿದೆ ಇದಕ್ಕೆ ಕಾರಣ ಗೊತ್ತಿಲ್ಲ ಆದ್ದರಿಂದ ಸಂಬಂಧಪಟ್ಟಂತೆ ನಂಜನಗೂಡಿನ ತಹಸಿಲ್ದಾರ್ ಮತ್ತು ಜಿಲ್ಲಾಧಿಕಾರಿ ಮತ್ತು ಶಾಸಕರು ಶ್ರೀಕಂಠೇಶ್ವರ ದೇವಾಲಯ ಇ ಒ ಅವರಿಗೆ ಉಸ್ತುವಾರಿ ಸಚಿವರಿಗೂ ಕೂಡ ಇದರ ಬಗ್ಗೆ ಮನವರಿಕೆ ಮಾಡಿಕೊಟ್ಟು 26ರಂದು ದೊಡ್ಡ ಜಾತ್ರೆಗೆ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಪತ್ರ ಸಲ್ಲಿಸಲು ಇಂದು ಮೈಸೂರಿಗೆ ಯುವಕರ ತಂಡ ಭೇಟಿ ನೀಡಿದೆ ಈ ಮನವಿಗೆ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಸ್ಪಂದಿಸಿ ಜಾತ್ರೆಗೆ ಅವಕಾಶ ಮಾಡಿಕೊಟ್ಟರೆ ಈ ಬಾರಿ ಜಾತ್ರೆ ನಡೆಯುತ್ತದೆ.
ನೋಡಿ ಸ್ವಾಮಿ ಫಿಲಂ ಥಿಯೇಟರ್ ಜನ ಸೇರುತ್ತದೆ ಸಂತೆಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆ ಉಪಚುನಾವಣೆಗಳಲ್ಲಿ ಸಾವಿರ ಮೇಲೆ ಜನ ಸೇರುತ್ತಾರೆ ಎಲ್ಲಾ ಜಿಲ್ಲೆಗಳಲ್ಲಿ ಕೂಡ ಜಾತ್ರೆ ನಡೆಯುತ್ತಲೇ ಇದೆ ಇದು ಯಾವುದಕ್ಕೂ ಕೊರೋನಾ ತೊಂದರೆ ನೋಡುವುದಿಲ್ಲವೇ ನಮ್ಮೂರ ಜಾತ್ರೆಗೆ ಮಾತ್ರ ಕೋರೋಣ ಬರುತ್ತದೆಯೇ ಏಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ಶ್ರೀಕಂಠೇಶ್ವರ ಭಕ್ತಾದಿಗಳ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ಈ ಬಾರಿ ಪಂಚ ಮಹರಥೋತ್ಸವ ನಡೆಯುತ್ತದೆಯೋ ನಡೆಯುವುದಿಲ್ಲವೋ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.