ವಿಜಯೇಂದ್ರ.ಕುಲಕರ್ಣಿ
ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಪ್ರತಿ ಹಳ್ಳಿಹಳ್ಳಿಗಳಲ್ಲೂ ಪುರಾತನ ಬಾವಿಗಳಿವೆ.ಹಳ್ಳಿಗಳಲ್ಲೂ ಸಹ ನಲ್ಲಿ, ಕೊಳವೆ ಬಾವಿಗಳ ಬಳಕೆ ಹೆಚ್ಚಾದಂತೆ ಇಂತಹ ಹಳೆಯ ಬಾವಿಗಳು ಪಾಳು ಬೀಳುತ್ತಿವೆ.
ಹಿಂದೆ ಆಡಳಿತ ನಡೆಸಿದ ರಾಜ ಮಹಾರಾಜರು ಅನೇಕ ಬಾವಿ,ಪುಷ್ಕರಣಿ,ಕೊಳ,ಹೊಕ್ಕರಣೆ ಮೊದಲಾದುವನ್ನು ಕಟ್ಟಿಸಿ ಜನಾನುರಾಗಿಗಳಾಗಿದ್ದರು.ಕೆರೆಕಟ್ಟೆ ಬಾವಿಗಳ ನಿರ್ಮಾಣ ಪುಣ್ಯದ ಕೆಲಸ ಎಂದು ಭಾವಿಸಿದ್ದರು. ಅನೇಕ ಶಾಸನಗಳಲ್ಲಿ ಕೆರೆ ಬಾವಿಗಳ ನಿರ್ಮಾಣದ ಉಲ್ಲೇಖಗಳಿವೆ. ಕಲಾತ್ಮಕ ಬಾವಿಗಳು:
ಅನೇಕ ಕಲಾತ್ಮಕ ಬಾವಿಗಳು ಕಲಬುರಗಿ ಜಿಲ್ಲೆಯಲ್ಲಿವೆ.ಉದಾಹರಣೆಗೆ ಕಲಬುರಗಿ ಹೀರಾಪುರದ ಬಾವಿಗಳು,ಯಡ್ರಾಮಿಯ ರಾಮತೀರ್ಥ, ಪೇಟಶಿರೂರದ ಬಾವಿ, ಕುಳಗೇರಿ,ಕಾಳಗಿ, ನಾಗಾವಿ, ಮೋಘಾ ಊರಿನ ಪುರಾತನ ದೇವಾಲಯಗಳ ಬಳಿಯ ಪುಷ್ಕರಣಿಗಳನ್ನು ಹೆಸರಿಸಬಹುದು.
ಕೆಲವು ಬಾವಿಗಳು ಇಂದಿಗೂ ಬಳಕೆಯಲ್ಲಿವೆ. ಬಹುತೇಕ ಕಡೆ ಹೂಳು ತುಂಬಿಕೊಂಡು ಉಪಯೋಗಕ್ಕೆ ಬಾರದಂತಾಗಿವೆ. ಇಂಥ ಪುರಾತನ ಬಾವಿಗಳ ಸರ್ವೇ ನಡೆಸಿ, ಅವುಗಳಿಗೆ ಮರುಜೀವ ತುಂಬುವ ಕೆಲಸವಾಗಬೇಕಿದೆ. ನಮ್ಮ ಸಾಂಪ್ರದಾಯಿಕ ಜಲಮೂಲಗಳನ್ನು ಉಳಿಸಬೇಕಾದ್ದು ಅಗತ್ಯವಾಗಿದೆ.
ಪುನಶ್ಚೇತನ ಪ್ರಯತ್ನ:
ಪಾಳುಬಿದ್ದ ಪುರಾತನ ಬಾವಿ, ಪುಷ್ಕರಿಣಿಗಳಿಗೆ ಮರುಜನ್ಮ ನೀಡುವ ಪ್ರಯತ್ನ ಸರಕಾರದ ಮಟ್ಟದಲ್ಲಿ ಅಲ್ಲಲ್ಲಿ ನಡೆದಿವೆ. ಜಿಲ್ಲಾಡಳಿತದಿಂದ ಇಂತಹ ಕಾರ್ಯಗಳು ಜಾಸ್ತಿಯಾಗಬೇಕಾದ ಅಗತ್ಯವಿದೆ. ಸಂಘಟನೆಗಳು ಸಹ ಪುರಾತನ ಜಲಮೂಲಗಳಿಗೆ ಮರುಜೀವÀ ನೀಡುವ ಕಾರ್ಯ ನಡೆಸಿವೆ. ಶಹಬಾದ ಬಳಿಯ ರಾವೂರ ಗ್ರಾಮದ ಪುರಾತನ ಪುಷ್ಕರಿಣಿಗೆ ಯುವಬ್ರಿಗೇಡ್ ಸಂಘಟನೆಯವರು ಪುನಶ್ಚೇತನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.