ಬೇಕಾ ಬಿಟ್ಟಿ ವಾಹನ ನಿಲುಗಡೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಜು,17: ಪಟ್ಟಣದ ಬಸ್ ನಿಲ್ದಾಣದ ಅಂಗಳದ ತುಂಬ ಬೇಕಾ, ಬಿಟ್ಟಿಯಾಗಿ ದ್ವಿಚಕ್ರ ವಾಹನಗಳ ನಿಲುಗಡೆ.
ಪಟ್ಟಣದ ಹೃದಯ ಬಾಗಲಲ್ಲಿರುವ ಖಾಸಗಿ ಬಸ್ ನಿಲ್ದಾಣದ ಅಂಗಳದ ಅರ್ಧ ದಷ್ಟು ಬಾಗದಲ್ಲಿ ದ್ವಿಚಕ್ರ ವಾಹನಗಳೇ ನಿಂತ ದೃಶ್ಯ ಕಂಡು ಬಂದಿತು. ಇದರಿಂದ ಬಸ್ ಸವಾರರಿಗೆ ಮತ್ತು ಬಸ್ ನಿಲ್ದಾಣದ ಕ್ಕೆ ಆಗಮಿಸುವ ಬಸ್ ಗಳಿಗೆ ತುಂಬ ತೊಂದರೆ ಎಂದು ಬಸ್ ಚಾಲಕರು ತಿಳಿಸಿದುಂಟು
ಬಸ್ ನಿಲ್ದಾಣದಲ್ಲಿರುವ ಅಂಗಡಿ ಹೋಟೆಲ್ ಗಳಿಗೆ ಹೋಗಲು ಜನರು ಪರದಾಡುವಂತ ಸ್ಥಿತಿ, ಬಸ್ ನಿಲ್ದಾಣದ ಹಿಂದೆ ಇರುವ ಪೋಲೀಸ್ ಠಾಣೆಗೆ ಹೋಗುವ ಜನರಿಗೂ ಈ ದ್ವಿಚಕ್ರ ವಾಹನಗಳ ಅಡ್ಡ ದಿಡ್ಡಿ ನಿಲುಗಡೆ ಯಿಂದ ಕಿರಿಕಿರಿ ಉಂಟಾಗುವುದು ಕಂಡು ಬಂದಿತು ಇದರ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.