ಬೇಕಾಬಿಟ್ಟಿ ಸಂಚರಿಸಿದರೆ ದಂಡದ ಜೊತೆಗೆ ಸೂಕ್ತ ಕ್ರಮ

ಜಗಳೂರು.ಮೇ.೧೯; ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನ ಎರಡನೆಯ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು  ಮೇ 25 ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ ಬೆಳಗ್ಗೆಯಿಂದ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡುವಂತೆ ನಿರ್ದೇಶನ ನೀಡಿರುವುದರಿಂದ  14 ದಿನಗಳ ಕಾಲ  ಸಂಪೂರ್ಣ ಸ್ತಬ್ಧ ವಾಗಲಿದೆ. ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಪಂಡಿತ್ ಮಾತನಾಡಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು 10 ಗಂಟೆಯ ನಂತರ  ಸಾರ್ವಜನಿಕರು ಮನೆಯಿಂದ ಹೊರ ಬರುವಂತಿಲ್ಲ ನಂತರ  ಅನಗತ್ಯವಾಗಿ ರಸ್ತೆಗಿಳಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ ತಾಲೂಕಿನಲ್ಲಿ ಕೊರೋನ ಎರಡನೇ ಅಲೆಯ ವ್ಯಾಪಕವಾಗಿ ಹರಡುತ್ತಿರುವುದರಿಂದ ಜನರು ಬೇಕಾ ಬಿಟ್ಟಿಯಾಗಿ ಮನೆಯಿಂದ ಹೊರ ಬರುವವರು ಲಾಕ್ ಡೌನ್ ನಿಯಮಗಳು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲನೆ ಮಾಡಿ ಕೋವಿಡ್ ವಿರುದ್ಧ ಜಯಶಾಲಿಗಳಾಗಿ ಬೇಕೆಂದು ಸರ್ಕಾರವು ಪಣತೊಟ್ಟಿರುವ ದರಿಂದ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಕೊರೋನ ನಿಯಂತ್ರಿಸಲು ಸಹಕಾರನೀಡಬೇಕು ಎಂದರು. ಉಪ ನಿರೀಕ್ಷಕ ಸಂತೋಷ್ ಬಾಗೂಜಿ ಮಾತನಾಡಿ ನಿಗದಿತ ಅವಧಿಯಲ್ಲಿ ಕಿರಾಣಿ,ತರಕಾರಿ, ಹಣ್ಣು ಹಂಪಲು, ಮಾಂಸ ಮಾರಾಟ ಮತ್ತು ಹೋಟೆಲ್ ಬಾರ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಅನಗತ್ಯ ಸಂಚರಿಸದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಮ್ಮ ಪೊಲೀಸ್ ಸಿಬ್ಬಂದಿಗಳಿಗೆ ಈಗಾಗಲೇ ತಿಳಿಸಲಾಗಿದೆ ಎಂದರು.