ಬೇಂದ್ರೆ ಕಾವ್ಯ ವಿಶ್ವಕ್ಕೆ ಮಾರ್ಗದರ್ಶನ-ಡಾ.ಶಿರೂರ

ಹುಬ್ಬಳ್ಳಿ-ನ20- “ಜ್ಞಾನಪೀಠ ಪ್ರಶಸ್ತಿ ವಿಜೇತರಾದ ವರಕವಿ ಡಾ|| ದ.ರಾ. ಬೇಂದ್ರೆಯವರ ಕಾವ್ಯ ಜನಸಾಮಾನ್ಯರಿಗೆ ಸಂದೇಶ ಕೊಡುವ ಕಾವ್ಯವಾಗಿದ್ದು, ಅದು ಇಡೀ ವಿಶ್ವಕ್ಕೇ ಮಾರ್ಗದರ್ಶನ ನೀಡುವಂಥದ್ದಾಗಿದೆ” ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ವಿಶ್ರಾಂತ ಪ್ರಾಧ್ಯಾಪಕರಾದ ಡಾ|| ಬಿ.ವಿ. ಶಿರೂರ್ ರವರು ಇಂದಿಲ್ಲಿ ಹೇಳಿದರು.
ಹುಬ್ಬಳ್ಳಿಯ ಬೇಂದ್ರೆ ಸಂಶೋಧನ ಸಂಸ್ಥೆಯ ಆಶ್ರಯದಲ್ಲಿ ಏರ್ಪಡಿಸಿದ್ದ “ದ. ರಾ. ಬೇಂದ್ರೆ 40ನೇ ವಾರ್ಷಿಕ ಸಂಸ್ಮರಣಾ ದಿನ”ದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಡಾ|| ವಾಮನ ಬೇಂದ್ರೆಯವರು ಸಂಪಾದಿಸಿ, ಡಾ|| ಕೆ. ಎಸ್. ಶರ್ಮಾರವರು ಪ್ರಕಟಿಸಿರುವ ದ. ರಾ. ಬೇಂದ್ರೆ ಜೀವನ ಮಹಾಕಾವ್ಯ – “ಔದುಂಬರಗಾಥೆ”ಯು ಅತ್ಯಂತ ಅದ್ಭುತವಾಗಿ ಸಂಪಾದಿತ ಕೃತಿಯಾಗಿದ್ದು, ವರಕವಿಗಳ 1427 ಕವನಗಳನ್ನು ವಿಷಯವಾರ್ ವರ್ಗೀಕರಿಸಿ ಅವುಗಳಿಗೆ ಅವಶ್ಯ ಟಿಪ್ಪಣಿಗಳು ಹಾಗೂ ವಿವರಣೆಗಳನ್ನು ಒಳಗೊಂಡು ಸಿದ್ಧಪಡಿಸಲಾಗಿದೆ ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ವರಕವಿ ಬೇಂದ್ರೆಯವರ ಕಾವ್ಯವನ್ನು ಕುರಿತು ಅನೇಕ ಕೃತಿಗಳು ಪ್ರಕಟವಾಗಿದ್ದರೂ, ಅವರ ಕಾವ್ಯ ಇನ್ನೂ ನಿಗೂಢ. ಬೇಂದ್ರೆ ಕಾವ್ಯದಲ್ಲಿ ಅಂತರ್ಗತವಾಗಿರುವ ಕೆಲವು ಮಹತ್ವದ ಸೂತ್ರಗಳನ್ನು ಈ ಕೆಳಗಿನಂತೆ ವಿವರಿಸಿದರು. ಬೇಂದ್ರೆಯವರು ನೀಡಿದ ಮಾರ್ಗದರ್ಶನವೆಂದರೆ: “ಒಂದನ್ನೊಂದು ತಿಂದು ಬದುಕುವುದು ಬದುಕಲ್ಲ, ಅದು ಸಾವು; ಒಂದನ್ನೊಂದು ತಿಳಿದು ಇರುವುದು ಬಾಳು” ಎಂಬ ಸೂತ್ರ. ಅವರ ಇನ್ನೊಂದು ಸೂತ್ರವೆಂದರೆ, “ಹುಸಿ ನಗುತ ಬಂದೇವು, ನಗುನಗುತ ಬಾಳೋಣ; ಬಡನೂರು ವರುಷವ, ಹರುಷದಿಂ ಕಳೆಯೋಣ”. ಅಂತೆಯೇ “ನಂಬಿಗೆ ಇಲ್ಲದ ಬದುಕು ಬಾಳೇ?” ಆದ್ದರಿಂದ ಜೀವನದಲ್ಲಿ ವಿಶ್ವಾಸವನ್ನಿಟ್ಟು ನಡೆಯುವುದನ್ನು ಕಲಿಯೋಣ” ಎಂದು ಮುಂತಾಗಿ ಬೇಂದ್ರೆ ಸೂತ್ರಗಳನ್ನು ವಿವರಿಸಿದರು.

ಈ ಸಂಸ್ಮರಣೆ ದಿನಾಚರಣೆಯ ಇನ್ನೋರ್ವ ಮುಖ್ಯ ಅತಿಥಿಗಳಾದ ವಿಶ್ರಾಂತ ಪ್ರಾಧ್ಯಾಪಕರಾದ ಪೆÇ್ರ|| ಕೆ. ಎಸ್. ಕೌಜಲಗಿಯವರು, ಈ ಸಮಾರಂಭದಲ್ಲಿ ಲೋಕಾರ್ಪಣೆಗೊಂಡ – “ಕುವಲಯ-87” ಕುರಿತು ಮಾತನಾಡುತ್ತಾ: “ಈ ಕೃತಿಯು ಅಕ್ಟೋಬರ್ 4, 2020 ರಂದು ಆಚರಿಸಲಾದ ಡಾ|| ಕೆ. ಎಸ್. ಶರ್ಮಾರವರ 87ನೆಯ ಜನ್ಮ ದಿನಾಚರಣೆಯ ಸಮಾರಂಭದ ದರ್ಶನದ ಕೃತಿಯಾಗಿದೆ. ಇದನ್ನು “ಉತ್ತಮ ಸಮಾರಂಭವನ್ನು ಕುರಿತಾದ ಉತ್ತಮವಾಗಿ ದಾಖಲೆಗೊಂಡ ಒಂದು ಉತ್ತಮ ಕೃತಿ” ಎಂದು ವರ್ಣಿಸುವುದು ಯೋಗ್ಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ|| ಕೆ. ಎಸ್. ಶರ್ಮಾರವರು – “ಬೇಂದ್ರೆಯವರು ತಮ್ಮ ಕಾವ್ಯಸಂದೇಶದಲ್ಲಿ ಅಮರಶಾಂತಿಯ ಪ್ರತಿಷ್ಠಾಪನೆಗೆ ಮಾವಿದ್ವಿಷಾವಹೈ ಸಮಾಜ ನಿರ್ಮಾಣ ಹಾಗೂ ಸಮರಸ ಜೀವನದ ಪ್ರತಿಷ್ಠಾಪನೆಯನ್ನು ಪ್ರತಿಪಾದಿಸುವ ವಿಶ್ವ ಸಂದೇಶವನ್ನು ನೀಡಿದ್ದಾರೆ. ಅವರ ಗುರಿಯಾದ “ಜಗದೇಳಿಗೆಯಾಗುವದಿದೆ ಕರ್ನಾಟಕದಿಂದೆ” – ಇದನ್ನು ಸಾಧಿಸಬೇಕಾಗಿದೆ” ಎಂದರು.
ಈ ಸಮಾರಂಭದಲ್ಲಿ “ಕುವಲಯ-87” ಸಮಾರಂಭ ದರ್ಶನದ ಕೃತಿಯನ್ನು ಎಲ್ಲ ಅತಿಥಿಗಳು ಲೋಕಾರ್ಪಣೆ ಮಾಡಿದರು.
ಮುಖ್ಯ ಅತಿಥಿಗಳಾದ ಡಾ|| ಬಿ. ವಿ. ಶಿರೂರ್ ಹಾಗೂ ಪೆÇ್ರ|| ಕೆ. ಎಸ್. ಕೌಜಲಗಿ ಇವರಿಗೆ ಡಾ|| ಕೆ. ಎಸ್. ಶರ್ಮಾ ಹಾಗೂ ಸುಮಿತ್ರಾ ಪೆÇೀತ್ನೀಸ್ ಶಾಲು ಹೊದಿಸಿ, ಗ್ರಂಥ ಸಮರ್ಪಣೆ ಮಾಡಿ ಗೌರವಿಸಿದರು.
ಪೆÇ್ರ|| ರವೀಂದ್ರ ಶಿರೋಳ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಚಾರ್ಯ ಸಂಜಯ ತ್ರಾಸದ್ ವಂದನಾರ್ಪಣೆಯನ್ನು ಮಾಡಿದರು.