
ಕಲಬುರಗಿ:ಸೆ.3:ಬಡತನದಲಿ ಬೆಂದು ಜೀವನದ ಪ್ರತಿ ಘಳಿಗೆಯನ್ನು ಸಾಹಿತ್ಯಮನವಾಗಿಸಿದ ವರಕವಿ ಬೇಂದ್ರೆ ಅವರ ಕಾವ್ಯ ಪ್ರತಿಭೆಗೆ ಅವರೇ ಸಾಟಿ. ಜೀವನದಲ್ಲಿ ಬೆಂದರಷ್ಟೇ ಬೇಂದ್ರೆಯಾಗಲು ಸಾಧ್ಯವೆಂದು ಚಿತ್ತಾಪೂರ ಮುರಾರ್ಜಿದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ರಜನಿ ಪಾಟೀಲ ಹೇಳಿದರು.
ಅವರು ಪಟ್ಟಣದ ಚನ್ನಬಸವೇಶ್ವರ ಪ್ರೌಢ ಶಾಲೆಯಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಬೆಳಕು-ವಾರಕ್ಕೊಂದು ಹೊಸ ಚಿಂತನೆ ಎನ್ನುವ ವಿಶೇಷ ಕಾರ್ಯಕ್ರಮದಲ್ಲಿ ವರಕವಿ ದ.ರಾ.ಬೇಂದ್ರೆ ಅವರ ಕುರಿತು ಉಪನ್ಯಾಸ ನೀಡುತ್ತಾ ಕಷ್ಟಗಳ ಕುಲುಮೆಯಲ್ಲಿ ಅರಳಿ ನಿಂತ ಅಪರೂಪದ ಪ್ರತಿಭೆ ಬೇಂದ್ರೆಯವರದ್ದು . ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಪಾಂಡಿತ್ಯ ಸಂಪಾದಿಸಿ ಸಾಹಿತ್ಯ ರಚಿಸಿ ಸೈ ಎನಿಸಿಕೊಂಡರು.ಜಾನಪದ ಸೊಗಡಿನ ಮೂಲಕ ಜನಸಾಮಾನ್ಯರನ್ನು ಮುಟ್ಟುವಂತೆ ಮಾಡಿದರು. ನಾಕುತಂತಿ ಕವನ ಸಂಕಲದ ಮೂಲಕ ನಾಡಿಗೆ ಹೆಮ್ಮೆಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಅರಳು ಮರಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಪದ್ಮಶ್ರೀ ಪ್ರಶಸ್ತಿ ಹೀಗೆ ಸಾಲು ಸಾಲು ಪ್ರಶಸ್ತಿಗಳು ಅವರನ್ನರಿಸಿ ಬಂದವು. ಜೊತೆಗೆ ನಾಲ್ಕು ವಿಶ್ವವಿಧ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡುವ ಮೂಲಕ ಅದರ ಮೌಲ್ಯವನ್ನು ಹೆಚ್ಚಿಸಿದರು ಇಂತಹ ಪ್ರತಿಭೆ ಕನ್ನಡ ಸಾಹಿತ್ಯ ಲೋಕದ ದೃವತಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕನ್ನಡ ಭೂಮಿ ಜಗೃತ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಮಾತನಡಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೇವೆಂದು ಕೀಳರಿಮೆಯನ್ನು ಹೊಂದಬೇಡಿ. ಇವನ್ನು ಕನ್ನಡ ಶಾಲೆಗಳಿಂದ ಮಾತ್ರ ರಾಜ್ಯದಲ್ಲಿ ಕನ್ನಡ ಭಾಷೆ ಉಳಿಯಲು ಸಾದ್ಯ.ಇಂತಹ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚದಂತೆ ಸರ್ಕಾರ ಹೆಚ್ಚಿನ ಆದ್ಯತೆಯನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ನೀಡಬೇಕೆಂದು ಹೇಳಿದರು.
ಶಾಲೆಯ ಆಡಳಿತಾಧಿಕಾರಿ ಚೆನ್ನವೀರಪ್ಪ ಗುಡ್ಡಾ ಮಾತನಾಡಿ ಕನ್ನಡ ಭಾಷೆ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಷೆಯಾಗಿದೆ. ಇಂತಹ ಕನ್ನಡದ ಬಗ್ಗೆ ಪ್ರತಿಯೊಬ್ಬರಿಗೂ ಹೆಮ್ಮೆಯ ಭಾವನೆ ಇರಬೇಕು ಎಂದು ಕೇಳಿದರು.
ಕಲಬುರಗಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿ ಕನ್ನಡ ಸಾಹಿತ್ಯವನ್ನು ಮನೆ ಮನಗಳಿಗೆ ಮುಟ್ಟಿಸುವಲ್ಲಿ ಕಸಾಪ ತಾಲೂಕ ಘಟಕ ಅತ್ಯಂತ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ. ನಮ್ಮ ನಾಡಿನ ಹಿರಿಮೆ ಗರಿಮೆ ಪರಂಪರೆಯನ್ನು ಪ್ರತಿಯೊಬ್ಬರೂ ತಿಳಿಯುವಂತೆ ಮಾಡಲಾಗುವುದು ಎಂದರು.
ಮುಖ್ಯ ಅತಿಥಿ ಜಿಲ್ಲಾ ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ ರಾವೂರ.ಅದ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಶ್ರೀಮತಿ ಮಾತಾಜಿ ನಾಗೂರೆ ವಹಿಸಿದ್ದರು.
ಶಿಕ್ಷಕಿ ಕವಿತಾ ಐನೋಳ್ಳಿ ನಿರೂಪಿಸಿದರು. ಪಾರ್ವತಿ ಪ್ರಾರ್ಥನಾ ಗೀತೆ ಹಾಡಿದರು.ಮಲ್ಲಮ್ಮ ಸ್ವಾಗತಿಸಿದರು.ಶಿಕ್ಷಕ ರಮೇಶ ದಿಗ್ಗಾವಿ ವಂದಿಸಿದರು.