ಹುಬ್ಬಳ್ಳಿ,ಸೆ.28:ವರಕವಿ ಡಾ. ದ.ರಾ.ಬೇಂದ್ರೆಯವರ ಪ್ರತಿ ಸಾಹಿತ್ಯ, ಕವನದಲ್ಲಿಯೂ ಒಂದೊಂದು ಸಂದೇಶವಿದ್ದು, ವಿಶ್ವವನ್ನೇ ಪರಿವರ್ತನೆ ಮಾಡುವಂತಹ ಸಂದೇಶ ಅವರದಾಗಿತ್ತು ಎಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷರಾದ ಡಾ.ಕೆ.ಎಸ್.ಶರ್ಮಾ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಬಸವೇಶ್ವರನಗರದ ಡಾ.ಕೆ.ಎಸ್.ಶರ್ಮಾ ಕ್ಯಾಂಪಸ್’ನ ವಿಶ್ವಶ್ರಮ ಚೇತನದಲ್ಲಿ ಸಂಜೀವಿನಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಡಾ.ಕೆ.ಎಸ್.ಶರ್ಮಾ ಸಮೂಹ ಸಂಸ್ಥೆಗಳು ಸಂಯುಕ್ತ ಆಶ್ರಯದಲ್ಲಿ ಡಾ.ಕೆ.ಎಸ್.ಶರ್ಮಾ ಇವರ 90 ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿರುವ ಡಾ.ದ.ರಾ.ಬೇಂದ್ರೆ ಸಾಹಿತ್ಯ ಸಪ್ತಾಹ ಅಂಗವಾಗಿ ಕಾರ್ಯಕ್ರಮದ ಐದನೇ ದಿನವಾದ ಬುಧವಾರ ಡಾ.ದ.ರಾ.ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಅಧ್ಯಕ್ಷತೆಯ ನುಡಿಗಳನ್ನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಶಿಕ್ಷಣ ತಜ್ಞರು ಹಾಗೂ ಸಾಹಿತಿಗಳಾದ ಸುರೇಶ ಕುಲಕರ್ಣಿ ಹಾಗೂ ಗಾಯಕರಾದ ಪಂ. ಬಾಲಚಂದ್ರ ನಾಕೋಡ್ ಅವರಿಗೆ ಡಾ. ಶರ್ಮಾ ಗೌರವಿಸಿದರು.
ಈ ಸಂದರ್ಭದಲ್ಲಿ ಚೇರ್ಮನ್ ಮೋಹನ್ ಲಿಂಬಿಕಾಯಿ, ಗಾಯಕರಾದ ಪಂ. ಬಾಲಚಂದ್ರ ನಾಕೋಡ್, ಡಾ. ಅಶೋಕ ಬಿಂಗಿ, ಡಾ. ಶಶಿಕಾಂತ ಹಿರೇಮಠ, ಆಡಳಿತ ಅಧಿಕಾರಿ ಡಾ. ಶ್ರೀನಿವಾಸ್ ಬನ್ನಿಗೋಳ, ಪ್ರಾಂಶುಪಾಲರಾದ ಡಾ. ಚರಂತಯ್ಯ ಹಿರೇಮಠ, ಪೆÇ್ರೀ. ರವೀಂದ್ರ ಶಿರಳ್ಕೋರ್, ಡಾ. ಸೋಮಶೇಖರ್ ಹುದ್ದಾರ, ಡಾ. ಮಹೇಶ್ ದೇಸಾಯಿ ಸೇರಿದಂತೆ ಉಪಸ್ಥಿತರಿದ್ದರು.