ಬೇಂದ್ರೆಯವರು ಕನ್ನಡ ನಾಡಿನ ಅಧ್ಭುತ ಪ್ರತಿಭೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಫೆ.02- ಬೇಂದ್ರೆಯವರು ಕನ್ನಡ ನಾಡಿನ ಅದ್ಭುತ ಪ್ರತಿಭೆ. ಬೇಂದ್ರೆಯವರ ಸಾಹಿತ್ಯ ಚಿಂತನೆಗಳು ಕನ್ನಡವನ್ನು ಶ್ರೀಮಂತಗೊಳಿಸಿ ವಿಶ್ವಖ್ಯಾತಿಯನ್ನು ತಂದು ಕೊಟ್ಟಿದೆ. ಕನ್ನಡದ ಜನರನ್ನು ತಮ್ಮ ಕವನಗಳ ಮೂಲಕ ಮನಸೂರೆಗೊಂಡಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷÀ ಸುರೇಶ್‍ಎನ್‍ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಜನ್ಮದಿನದ ಸಮಾರಂಭದಲ್ಲಿ ಮಾತನಾಡುತ್ತಾ ವರಕವಿ,ವಿಶ್ವಕವಿ, ಶಬ್ದ ಗಾರುಡಿಗಕನ್ನಡ ಸಾಹಿತ್ಯದ ಮೇರು ವ್ಯಕ್ತಿತ್ವದ, ಸರಳ ಸಜ್ಜನಿಕೆಯ, ದೇಶ ಪ್ರೇಮದ ಸಾಹಿತಿ ಬೇಂದ್ರೆಯವರನ್ನು ನೆನೆಯುವುದೇ ಪುಣ್ಯ. ಅವರ ಸಾಹಿತ್ಯ, ಕವನಗಳು, ನಾಟಕಗಳು, ವಿಮರ್ಶೆಗಳು, ಜನಸಾಮಾನ್ಯರನ್ನು ತಲುಪಿ ವಿಶ್ವಪ್ರಸಿದ್ಧವಾಗಿದೆ. ಅವರ ಕವನಗಳನ್ನು ಗಾಯಕರು ಮತ್ತಷ್ಟು ವಿಶ್ವ ಪ್ರಸಿದ್ಧಿ ಮಾಡಿದ್ದಾರೆ. ಸ್ವಾತಂತ್ರ್ಯ ಚಳುವಳಿಯ ಅವರ ನರಬಲಿ ಕವನ ಬ್ರಿಟಿμï ಸರ್ಕಾರದ ಕೋಪಕ್ಕೆ ಕಾರಣವಾಗಿತ್ತು. ಸೆರೆಮನೆ ವಾಸ ಅನುಭವಿಸಿದ ಕನ್ನಡದ ಸಾಹಿತಿ ಬೇಂದ್ರೆಯವರು ಅತ್ಯುತ್ತಮ ವಾಗ್ಮಿಗಳು ಆಗಿದ್ದವರು. ಅವರ ಚಿಂತನೆಗಳು ಆಧ್ಯಾತ್ಮಿಕತೆ, ಶಾಸ್ತ್ರೀಯ,ಗ್ರಾಮೀಣ, ಜನಪದ ಹಾಗೂ ಸಾಮಾನ್ಯರ ಆಡು ಭಾμÉಯ ನುಡಿಗಟ್ಟುಗಳ ಮೂಲಕ ಇಂದಿಗೂ ಜನಪ್ರಿಯವಾಗಿರುವುದನ್ನು ಕಾಣಬಹುದು. ಕನ್ನಡದ ಟಾಗೋರ್‍ಎಂದೇ ಪ್ರಸಿದ್ಧಿಯಾಗಿದ್ದ ಬೇಂದ್ರೆಯವರ ನಾಡಿನ ಪ್ರೇಮ ಸಾಹಿತ್ಯ ರಚನೆ ಯುವಕರಿಗೆ ಆದರ್ಶವೆಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಿಶೋರ್ ಕುಮಾರ್ ಮಾತನಾಡಿದ ರಾಬೇಂದ್ರೆ ಅವರು ಕನ್ನಡ ಭಾಷÉಯ ಜೊತೆಗೆ ಹಲವಾರು ಭಾಷಗಳಲ್ಲಿ ಪಾಂಡಿತ್ಯವನ್ನು ಹೊಂದಿಅರವಿಂದ ಮಹರ್ಷಿಗಳ ಪ್ರಭಾವದಿಂದಅವರ ಸಾಹಿತ್ಯದರಚನೆ ದೇಶಿಯ ಪ್ರಜ್ಞೆಯನ್ನು ಹೆಚ್ಚಿಸಿತ್ತು. ಬೇಂದ್ರೆಯವರ ಸಂಸ್ಕøತ,ಮರಾಠಿ ಮತ್ತುಕನ್ನಡದ ಭಾಷೆಗಳ ಹಿಡಿತಅವರಗೆಕನ್ನಡದ ಸಾಹಿತ್ಯದಲ್ಲಿ ಸಮಗ್ರವಾದ ಸಾಹಿತ್ಯವನ್ನುರಚಿಸಲು ಸಾಧ್ಯವಾಯಿತುಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷÀತ್ತಿನ ನಿರ್ದೇಶಕರವಿಚಂದ್ರಪ್ರಸಾದ್‍ರವರು ಬೇಂದ್ರೆಯವರ ವ್ಯಕ್ತಿತ್ವಕುರಿತು ಪ್ರಾಸ್ತಾವಿಕವಾಗಿ ವಿವರಿಸಿದರು. ಬೇಂದ್ರೆಅವರ ಕವನಗಳು ಸಾವಿರಾರುಗಾಯಕರಿಗೆ ಇಂದಿಗೂ ಶಕ್ತಿಯಾಗಿಅವರ ಕವನ ಗಾಯನದ ಮೂಲಕ ಸಂತೃಪ್ತಿ ಭಾವನೆಯನ್ನು ಮನಸ್ಸಿಗೆ ನೆಮ್ಮದಿಯನ್ನುತಂದುಕೊಡುತ್ತಿದ್ದಾರೆಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ,ವೆಂಕಟೇಶ್ ಬಾಬು, ಸುರೇಶ್‍ಗೌಡ, ಬೊಮ್ಮಾಯಿತಾಂಡವಮೂರ್ತಿ, ಮುಂತಾದವರು ಉಪಸ್ಥಿತರಿದ್ದರು.